ಜಿಲ್ಲಾಧಿಕಾರಿ ವಿಲ್ಲೇಜ್ ಅದಾಲತ್
ಕಾಸರಗೋಡು: ಜಿಲ್ಲಾಧಿಕಾ ರಿಯ ವಿಲ್ಲೇಜ್ ಅದಾಲತ್ ಮುಂದು ವರಿಯುತ್ತಿದೆ. ಕಯ್ಯಾರು ವಿಲ್ಲೇಜ್ನಲ್ಲಿ 12 ದೂರುಗಳನ್ನು ಸ್ವೀಕರಿಸಲಾಯಿತು. ಸರ್ವೆ ಅಸಿಸ್ಟೆಂಟ್ ಡೈರೆಕ್ಟರ್ ಆಸಿಫ್ ಆಲಿಯಾರ್, ವಿಲ್ಲೇಜ್ ಆಫೀಸರ್ ಮೊದಲಾದವರು ಭಾಗವಹಿಸಿದರು. ಅಕ್ಟೋಬರ್ 17ರಂದು ಬೆಳಿಗ್ಗೆ 9.30೦ಕ್ಕೆ ವೆಳ್ಳರಿಕುಂಡ್ ತಾಲೂಕಿನ ಚಿತ್ತಾರಿಕಲ್ ವಿಲ್ಲೇಜ್, 10.30ಕ್ಕೆ ವೆಸ್ಟ್ ಎಳೆರಿ ವಿಲ್ಲೇಜ್, 18ರಂದು ಬೆಳಿಗ್ಗೆ 9.30ಕ್ಕೆ ಕಾಸರಗೋಡು ತಾಲೂಕಿನ ಆದೂರು ವಿಲ್ಲೇಜ್, 10.30ಕ್ಕೆ ಮುಳಿಯಾರು ವಿಲ್ಲೇಜ್, ಮಧ್ಯಾಹ್ನ 12 ಗಂಟೆಗೆ ತಳಂಗರೆ ವಿಲ್ಲೇಜ್, ಅಪರಾಹ್ನ 2.30ರಿಂದ ಹೊಸದುರ್ಗ ತಾಲೂಕಿನ ವಿವಿಧ ವಿಲ್ಲೇಜ್ ಕಚೇರಿಗಳಲ್ಲಿ ಅದಾಲತ್ ನಡೆಯಲಿದೆ.