ಜಿಲ್ಲಾ ಬಂಟರ ಸಂಘದ ವತಿಯಿಂದ ಗೌರವಾರ್ಪಣೆ
ಕಾಸರಗೋಡು: ಜಿಲ್ಲಾ ಬಂಟರ ಸಂಘದ ವತಿಯಿಂದ ಜಿಲ್ಲಾ ಬಂಟರ ಮಾಜಿ ಅಧ್ಯಕ್ಷ ಜಿ.ಕೆ. ಶೆಟ್ಟಿ ಬೋಳ್ನಾಡು ಗುತ್ತು ಅವರನ್ನು ಸ್ವ-ಗೃಹದಲ್ಲಿ ಗೌರವಿಸಲಾಯಿತು. ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ. ಸುಬ್ಬಯ್ಯ ರೈ ನೇತೃತ್ವ ವಹಿಸಿದ್ದು, ಉಪಾಧ್ಯಕ್ಷರಾದ ಚಂದ್ರಹಾಸ ರೈ ಬದಿಯಡ್ಕ, ಶ್ಯಾಮಲಾ ಎಂ.ಟಿ, ಕೋಶಾಧಿಕಾರಿ ಚಿದಾನಂದ ಆಳ್ವ ಮಂಜಕೊಟ್ಟಿಗೆ, ಸಹಕಾರ್ಯ ದರ್ಶಿಗಳಾದ ಗೋಪಾಲಕೃಷ್ಣ ಶೆಟ್ಟಿ ಗುತ್ತಿಗಾರು, ಕಿರಣ್ ಮಾಡ ಆದೂರು, ಪ್ರಧಾನ ಕಾರ್ಯದರ್ಶಿ ಮೋಹನ್ ರೈ ಕಯ್ಯಾರು, ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಉಪಸ್ಥಿತರಿದ್ದರು. ಜಿ.ಕೆ. ಶೆಟ್ಟರ ಪರವಾಗಿ ಪುತ್ರಿ ಚಿತ್ರಲೇಖಾ ಎಸ್. ಆಳ್ವ, ಅಳಿಯ ಸುನಿಲ್ಚಂದ್ರ ಆಳ್ವ ಅಡ್ಕತ್ತಬೈಲು ಮಾತನಾಡಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಪ್ರತಿನಿಧಿ ವಸಂತರಾಜ ಶೆಟ್ಟಿ ಭಾಗವಹಿಸಿದ್ದರು.