ಜಿಲ್ಲಾ ಮಟ್ಟದ ಭೂಹಕ್ಕುಪತ್ರ ವಿತರಣಾ ಮೇಳ ಆರಂಭ: ಸಚಿವರಿಂದ ಉದ್ಘಾಟನೆ
ಕಾಸರಗೋಡು: ಕಾಸರಗೋಡು ಜಿಲ್ಲಾ ಮಟ್ಟದ ಭೂಹಕ್ಕುಪತ್ರ (ಪಟ್ಟಾ) ವಿತರಣಾ ಮೇಳ ಕಾಸರಗೋಡು ನಗರಸಭಾ ಮುನ್ಸಿಫಲ್ ಟೌನ್ ಹಾಲ್ನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಕಂದಾಯ ಸಚಿವ ಕೆ. ರಾಜನ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಭೂಹಕ್ಕುಪತ್ರಗಳನ್ನು ವಿತರಿಸಿದರು. ಒಟ್ಟು 906 ಮಂದಿಗೆ ಅವರ ಕೈವಶವಿರಿಸಿರುವ ಜಮೀನಿಗೆ ಭೂಹಕ್ಕುಪತ್ರ ಇಂದು ವಿತರಿಸ ಲಾಗುತ್ತಿದೆ. ಇದರಲ್ಲಿ ಲ್ಯಾಂಡ್ ಟ್ರಿಬ್ಯೂನಲ್ (ಭೂಕಂದಾಯ)ಗೆ ಸೇರಿದ 683, ಮುಜರಾಯಿ ಮಂಡಳಿಗೆ ಸೇರಿದ ಸ್ಥಳದ 20, ಲ್ಯಾಂಡ್ ಅಸೈನ್ಮೆಂಟ್ (ಎಲ್ಎ)ಗೆ ಸೇರಿದ 157, ಅರಣ್ಯ ಭೂಮಿಗೆ ಸೇರಿದ 36, ಮತ್ತು ಮಿಗತೆ ಭೂಮಿಗೆ ಸೇರಿದ 10 ಭೂಹಕ್ಕು ಪತ್ರಗಳನ್ನು ಅರ್ಹರಿಗೆ ಇಂದು ವಿತರಿಸಲಾಗುತ್ತಿದೆ.ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಕಂದಾಯ, ಅರಣ್ಯ, ಭೂಕಂದಾಯ ಮತ್ತು ಮುಜರಾಯಿ ಮಂಡಳಿಗೆ ಸೇರಿದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಅರ್ಹತೆ ಹೊಂದಿರುವ ಎಲ್ಲರಿಗೂ ಭೂಹಕ್ಕುಪತ್ರ ವಿತರಿಸಲಾಗು ವುದೆಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ