ಜಿಲ್ಲಾ ಶಾಲಾ ಕಲೋತ್ಸವ: ಚಪ್ಪರ ಮುಹೂರ್ತ
ಮುಳ್ಳೇರಿಯ: ದ.೫ರಿಂದ ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿರುವ ಜಿಲ್ಲಾ ಶಾಲಾ ಕಲೋತ್ಸವದ ಚಪ್ಪರ ನಿರ್ಮಾಣಕ್ಕೆ ನಿನ್ನೆ ಚಾಲನೆ ನೀಡಲಾಯಿತು. ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಚಪ್ಪರ ಹಾಗೂ ವೇದಿಕೆ ಉಪ ಸಮಿತಿ ಅಧ್ಯಕ್ಷ ಎಂ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಎಂ.ವಿ. ರಾಜೀವನ್ ಸ್ವಾಗತಿಸಿದರು. ಜಿಲ್ಲಾ ಪಂ. ಸದಸ್ಯೆ ಎಸ್.ಎನ್. ಸರಿತ, ಕಾರಡ್ಕ ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, ಉಪಾಧ್ಯಕ್ಷೆ ಎಂ. ಜನನಿ, ಸದಸ್ಯ ಎಂ. ರತ್ನಾಕರ, ಇ. ಮೋಹನನ್, ರೂಪಸತ್ಯನ್, ಎಂ. ಪ್ರಸೀಜ, ಪಿಟಿಎ ಅಧ್ಯಕ್ಷ ಸುರೇಶ್ ಕುಮಾರ್, ಎಂಪಿಟಿಎ ಅಧ್ಯಕ್ಷೆ ಗೀತಾ ತಂಬಾನ್, ಪ್ರಾಂಶುಪಾಲೆ ಮೀರ ಜೋಸ್, ಮುಖ್ಯೋಪಾಧ್ಯಾಯ ಎಂ. ಸಂಜೀವ ಎಸ್.ಎಂ.ಸಿ. ಅಧ್ಯಕ್ಷ ಸುರೇಶ್ ಮೂಡಾಂಕುಳಂ, ಕುಂಞಿಕೃಷ್ಣನ್ ಮಾತನಾಡಿದರು. ರಾಜೀವನ್ ಸ್ವಾಗತಿಸಿದರು.