ಜಿಲ್ಲೆಯನ್ನು ತಂಪಾಗಿಸಿದ ಮಳೆ
ಕಾಸರಗೋಡು: ರಾಜ್ಯದಲ್ಲಿ ಇಂದು ರಾತ್ರಿಯಿಂದ ಬೇಸಿಗೆ ಮಳೆ ಸುರಿಯಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಈ ಬೇಸಿಗೆ ಮಳೆ ಮುಂದಿನ ಹತ್ತು ದಿನಗಳ ತನಕ ಮುಂದುವರಿಯಲಿದೆ. ಉತ್ತರ ಕೇರಳದಲ್ಲಿ ನಾಳೆ ಸಂಜೆಯಿಂ ದ ಭಾರೀ ಮಳೆ ಉಂಟಾಗಲಿದೆಯೆಂ ದೂ ಇಲಾಖೆ ಹೇಳಿದೆ.
ಕಾಸರಗೋಡು ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಇಂದು ಬೆಳಿಗ್ಗೆ ಭಾರೀ ಗುಡುಗುಸಿಡಿಲು ಸಹಿತ ಸಾಧಾರಣ ಮಳೆ ಸುರಿದಿದೆ. ಇದೇ ವೇಳೆ ಜಿಲ್ಲೆಯ ಹಲವೆಡೆಗಳಲ್ಲಿ ವಿದ್ಯುತ್ ಪೂರೈಕೆ ಕೂಡಾ ಹಠಾತ್ ನಿಲುಗಡೆಗೊಂಡಿದೆ. ಬೇಸಿಗೆ ಮಳೆಯಿಂದ ಇಳೆ ತಾತ್ಕಾಲಿಕವಾಗಿ ತಂಪೇರಿ ಬಿಸಿಲ ಧಗೆ ಅಲ್ಪ ಶಮನ ಗೊಂಡಿದೆ. ಇಂದು ರಾತ್ರಿಯಿಂದ ಮಳೆ ಮತ್ತೆ ಸುರಿಯಲಿದೆಯೆಂದು ಇಲಾಖೆ ಹೇಳಿದೆ.