ಜಿಲ್ಲೆಯಲ್ಲಿ ವ್ಯಾಪಕಗೊಂಡ ಜುಗಾರಿ ದಂಧೆ: ಲಕ್ಷಾಂತರ ರೂಪಾಯಿಗಳ ವ್ಯವಹಾರ; ನಾಮಮಾತ್ರವಾಗುತ್ತಿರುವ ಪೊಲೀಸ್ ಕ್ರಮ

ಕಾಸರಗೋಡು: ಉತ್ಸವ ಕಾಲ ಆರಂಭಗೊಳ್ಳುವುದರೊಂದಿಗೆ ವಿವಿಧ ಕಡೆಗಳಲ್ಲಿ ಹಣವಿರಿಸಿ ಜುಗಾರಿ ದಂಧೆ ವ್ಯಾಪಕಗೊಂಡಿದೆ.

ಪ್ರತೀ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿಗಳ ಜುಗಾರಿ ನಡೆಯುತ್ತಿ ದೆಯೆಂದು ತಿಳಿದುಬಂದಿದೆ. ಈ ಬಗ್ಗೆ ದೂರುಗಳು ಕೇಳಿಬಂದಿದ್ದರೂ ಸಂಬಂಧಪಟ್ಟವರ ಭಾಗದಿಂದ ಕ್ರಮ ಉಂಟಾಗುತ್ತಿಲ್ಲವೆಂಬ ಆರೋಪವುಂಟಾಗಿದೆ. ಉತ್ಸವ ಸ್ಥಳಗಳ ಸಮೀಪದ ಹಿತ್ತಿಲುಗಳಲ್ಲಿ ಜುಗಾರಿ ದಂಧೆ ಹಗಲು-ರಾತ್ರಿಯೆಂಬ  ವ್ಯತ್ಯಾಸವಿಲ್ಲದೆ ನಡೆಯುತ್ತಿದೆ.

ಪ್ರತೀ ಕೇಂದ್ರದಲ್ಲೂ ಆಯಾ ಪ್ರದೇಶ ನಿವಾಸಿಗಳ ಬೆಂಬಲದೊಂದಿಗೆ ಈ ದಂಧೆ ನಡೆಯುತ್ತಿದೆ. ಇಂತಿಷ್ಟು ಮೊತ್ತ ನೀಡಿದರೆ  ಜುಗಾರಿಗೆ ಬೇಕಾದ ಸೌಕರ್ಯ ಒದಗಿಸಿಕೊಡುವುದಾಗಿ ಜುಗಾರಿ ದಂಧೆ ನಡೆಸುವವರಿಗೆ ಸ್ಥಳೀಯರಾದ ಕೆಲವು ಮಂದಿ ಭರವಸೆ ನೀಡುತ್ತಾರೆ. ಜುಗಾರಿ ನಡೆಸುವವರನ್ನು, ಆಟಗಾರರನ್ನು ಹಾಗೂ ಪೊಲೀಸರನ್ನು ಇದೇ ತಂಡ ನಿಯಂತ್ರಿಸುತ್ತಿದೆ ಎನ್ನಲಾಗುತ್ತಿದೆ. ಪೊಲೀಸರಿಗೆ ದೊಡ್ಡ ಮೊತ್ತದ ಭರವಸೆಯನ್ನು ಈ ತಂಡ ನೀಡುತ್ತಿದೆಯೆಂದು ಹೇಳಲಾಗುತ್ತಿದೆ. ಇದರಿಂದಾಗಿ ಜುಗಾರಿ ಕೇಂದ್ರಗಳಿಗೆ ಪೊಲೀಸರು  ತಲುಪುತ್ತಿಲ್ಲ. ಇದೇ ವೇಳೆ ಪೊಲೀಸರು ಅದಕ್ಕೆ ತಲೆಬಾಗದಿದ್ದಲ್ಲಿ ಜುಗಾರಿ ಕೇಂದ್ರದ ಹೊಣೆಗಾರಿಕೆಯುಳ್ಳ ಸ್ಥಳೀಯ ನಿವಾಸಿಗಳು ಪೊಲೀಸರು ಬರಲು ಸಾಧ್ಯತೆಯುಳ್ಳ  ಸ್ಥಳಗಳಲ್ಲಿ ಸಂಜೆಯಿಂದ ಮುಂಜಾನೆವರೆಗೆ ನಿಗಾ ವಹಿಸಲು ಜನರನ್ನು ಏರ್ಪಾಡು ಮಾಡುತ್ತಿದ್ದಾರೆ.

ಪೊಲೀಸರು ತಲುಪಿದರೆ ಆ ಬಗ್ಗೆ ಮಾಹಿತಿಯನ್ನು ಕೂಡಲೇ ಜುಗಾರಿ ಕೇಂದ್ರಕ್ಕೆ ತಿಳಿಸಲಾಗುತ್ತಿದೆ. ಅಷ್ಟರಲ್ಲಿ ಆಟಗಾರರು ಹಾಗೂ ಜುಗಾರಿ ನಡೆಸುವವರು ಹಣ ಸಹಿತ ತಮ್ಮ ಸಲಕರಣೆಗಳನ್ನು ತೆಗೆದು ಪರಾರಿಯಾಗುತ್ತಾರೆ. ಈ ವಿಷಯ ತಿಳಿಯದೆ ಪೊಲೀಸರು ಅಲ್ಲಿಗೆ ತಲುಪಿ  ಬರಿಗೈಯಲ್ಲಿ ಮರಳುತ್ತಿದ್ದಾರೆ. ಜುಗಾರಿ ಕೇಂದ್ರಗಳ ಕುರಿತು ತಿಳಿದು ದೂರದ ಊರುಗಳಿಂದಲೂ ಜನರು ತಲುಪುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page