ಜಿಲ್ಲೆಯಲ್ಲೂ ಹುಲಿ ಕಾಟದ ಭೀತಿ: ಸಾಕು ನಾಯಿಯನ್ನು ಕೊಂದು ಹಾಕಿದ ಹುಲಿ
ಕಾಸರಗೋಡು: ರಾಜ್ಯದ ಇತರ ಜಿಲ್ಲೆಗಳಲ್ಲಿ ತಲೆದೋರಿರುವ ಹಾಗೆ ಈಗ ಕಾಸರಗೋಡು ಜಿಲ್ಲೆಯಲ್ಲೂ ಹುಲಿ ಕಾಟ ಭೀತಿ ಆವರಿಸಿದೆ. ಜಿಲ್ಲೆಯ ಮಲೆನಾಡು ಪ್ರದೇಶವಾದ ಪನತ್ತಡಿ ಪಂಚಾಯತ್‌ನ ಕಲ್ಲಪಳ್ಳಿ ಪ್ರದೇಶದಲ್ಲಿ ಹುಲಿಕಾಟ ತಲೆಯೆತ್ತಿದೆ. ಇಲ್ಲಿನ ಮಾಂಬಳದ ಎನ್.ಕೆ. ಜಯಪ್ರಕಾಶ್ ಎಂಬವರ ಪತ್ನಿ ಪಿ. ವಿಜಯ ಕುಮಾರಿ ಎಂಬವರ ಮನೆಯ ಸಾಕು ನಾಯಿಯನ್ನು ಹುಲಿ ಕಚ್ಚಿ ಕೊಲ್ಲುತ್ತಿರುವ ದೃಶ್ಯವನ್ನು ಮನೆಯವರು ಕಂಡಿದ್ದಾರೆನ್ನಲಾಗಿದೆ. ಕಲ್ಲಪಳ್ಳಿ ಅರಣ್ಯಕ್ಕೆ ತಾಗಿಕೊಂಡಿರುವ ಪ್ರದೇಶವೂ ಇದಾಗಿದೆ. ಕೆಲವು ದಿನಗಳಿಂದ ಕಲ್ಲಪಳ್ಳಿ ಪರಿಯಾರಂ, ತೊಡ್ಡಮನೆ ಮತ್ತಿತರ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡಿದೆಯೆಂದು ಪ್ರದೇಶ ನಿವಾಸಿಗಳು ಹೇಳುತ್ತಿದ್ದಾರೆ.