ಜಿಲ್ಲೆಯ ಇನ್‌ಸ್ಪೆಕ್ಟರ್, ಎಸ್‌ಐಗಳಿಗೆ ವರ್ಗಾವಣೆ
ಕಾಸರಗೋಡು: ಲೋಕಸಭಾ ಚುನಾವಣೆಯ ಪೂರ್ವಭಾವಿ ಕ್ರಮ ಎಂಬಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಮತ್ತು ಎಸ್‌ಐಗಳನ್ನು ಇಂದ ಬೇರೆಡೆಗೆ ವರ್ಗಾಯಿಸಿ ಆದೇಶ ಜ್ಯಾರಿಗೊಳಿಸಿದೆ.
ಇದರಂತೆ ಕಾಸರಗೋಡು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್‌ರನ್ನು (ಸ್ಟೇಟ್ ಸ್ಪೆಷಲ್ ಬ್ರಾಂಚ್-ಎಸ್‌ಎಸ್‌ಬಿ) ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ಪ್ರಮೋದ್‌ರನ್ನು ಕಣ್ಣೂರು ಸಿಟಿಗೆ ವರ್ಗಾಯಿಸಲಾಗಿದೆ.
ಇದೇ ರೀತಿ ಮೇಲ್ಪರಂಬ ಠಾಣೆಯ ಇನ್‌ಸ್ಪೆಕ್ಟರ್ ಟಿ. ಉತ್ತಮ್‌ದಾಸ್‌ರನ್ನು ವಿಜಿಲೆನ್ಸ್‌ಗೂ, ಕಾಸರಗೋಡು ಸೈಬರ್ ಸೆಲ್ ಸ್ಟೇಶನ್‌ನ ಪಿ. ನಾರಾಯಣನ್‌ರನ್ನು ಕಲ್ಲಿಕೋಟೆ ಸಿಟಿ ಸೈಬರ್ ಸೆಲ್ ಸ್ಟೇಷನ್, ಬೇಡಗಂ ಇನ್‌ಸ್ಪೆಕ್ಟರ್ ಟಿ. ದಾಮೋದರನ್‌ರನ್ನು ಕಲ್ಲಿಕೋಟೆ ಮಾವೂರು, ಆದೂರು ಠಾಣೆಯ ಇನ್‌ಸ್ಪೆಕ್ಟರ್ ಎ. ಅನಿಲ್ ಕುಮಾರ್ ರನ್ನು ಆಲಿಕ್ಕೋಡು, ಚಿಟ್ಟಾರಿಕಲ್ ಇನ್‌ಸ್ಪೆಕ್ಟರ್ ರಂಜಿತ್ ರವೀಂದ್ರನ್‌ರನ್ನು ಪನ್ನಿಯಂಕರ, ಕುಂಬಳೆ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್‌ರನ್ನು ಪಳಯಂಗಾಡಿ,. ಹೊಸದುರ್ಗ ಇನ್‌ಸ್ಪೆಕ್ಟರ್ ಕೆ. ಪಿ. ಶೈನ್‌ರನ್ನು ತಳಿಪರಂಬ, ನೀಲೇಶ್ವರದ ಕೆ. ಪ್ರೇಮ್‌ಸದನ್‌ರನ್ನು ಮಟ್ಟನ್ನೂರು, ತೃಕ್ಕರಿಪುರ ಕರಾವಳಿ ಪೊಲೀಸ್ ಠಾಣೆಯ ಎ. ಅನಿಲ್ ಕುಮಾರ್‌ರನ್ನು ತಿರೂರಂಬಾಡಿ ಮತ್ತು ಅಂಬಲತರ ಠಾಣೆಯ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್‌ರನ್ನು ಪಯ್ಯನ್ನೂರಿಗೆ ವರ್ಗಾಯಿಸಲಾಗಿದೆ.
ಎಸ್‌ಐಗಳು
ಕಾಸರಗೋಡು ಪೊಲೀಸ್ ಠಾಣೆ ಯ ಎಸ್‌ಐ ಎಂ.ವಿ.ಸಂತೋಷ್‌ರನ್ನು ಸುಲ್ತಾನ್ ಬತ್ತೇರಿಗೂ, ಹೊಸದುರ್ಗ ಎಸ್‌ಐ ಎಂ. ಆಜಾದ್‌ರನ್ನು ಪಾನೂರು, ನೀಲೇಶ್ವರ ಎಸ್‌ಐ ಕೆ. ಶ್ರೀಹರಿಯನ್ನು ಕೂತುಪರಂಬ ಠಾಣೆಗೆ ವರ್ಗಾಯಿಸಲಾಗಿದೆ.
ಇದೇ ರೀತಿ ಚೀಮೇನಿ ಎಸ್‌ಐ ಕೆ. ಸಲೀಂರನ್ನು ಅಗಳಿ, ಅಂಬಲತರ ಎಸ್‌ಐ ಕೆ. ಪ್ರಜಿತ್‌ರನ್ನು ಕೊಡುವಳ್ಳಿ, ಮೇಲ್ಪರಂಬ ಎಸ್‌ಐ ಶಾಜಿ ಪಟ್ಟೇರಿಯವರನ್ನು ಕಣ್ಣಾಪುರಕ್ಕೆ ವರ್ಗಾಯಿಸಲಾಗಿದೆ. ವಿದ್ಯಾನಗರ ಠಾಣೆಯ ಕೆ.ಜಿ. ಬಿನೋಯ್‌ರನ್ನು ಇರಿಟ್ಟಿ, ಕುಂಬಳೆಯ ಎಂ.ಎಲ್. ಬಿಜೋರನ್ನು ಪೇರಾವೂರು, ಚಿತ್ತಾರಿಕಲ್‌ನ ಎಂ.ಪಿ. ವಿನೀಶ್ ಕುಮಾರ್‌ರನ್ನು ಅಲಿಕ್ಕೋಡು, ಕಾಸರಗೋಡು ಸೈಬರ್ ಪೊಲೀಸ್ ಠಾಣೆಯ ರಾಜೇಶ್ ಅಳಿಕ್ಕೋ ಡನ್‌ರನ್ನು ಆರಳಂ, ಆದೂರು ಎಸ್.ಐ ಪಿ. ನಳಿನಾಕ್ಷನ್‌ರನ್ನು ಪರಿಯಾರಂ ಮತ್ತು ಬೇಡಡ್ಕ ಎಸ್‌ಐ ಸುಭಾಷ್ ಪಿ ರನ್ನು ಪೆರಿಂಙೋಗೆ ವರ್ಗಾಯಿಸಲಾಗಿದೆ.