ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಕಾಂಗ್ರೆಸ್ ಮಾರ್ಚ್
ಕಾಸರಗೋಡು: ಜಿಲ್ಲೆಯ ಕಾಂಗ್ರೆಸ್ ಮಂಡಲ ಸಮಿತಿಗಳ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಬೆಳಿಗ್ಗೆ ಮಾರ್ಚ್ ನಡೆಸಲಾಯಿತು. ಮುಖ್ಯಮಂತ್ರಿಯ ಅಂಗರಕ್ಷಕರು ಮತ್ತು ಪೊಲೀಸರು ಸಿಪಿಎಂ ಗೂಂಡಾಗಳೊಂದಿಗೆ ಕೈಬೆಸೆದು ಯೂತ್ ಕಾಂಗ್ರೆಸ್ ಮತ್ತು ಕೆಎಸ್‌ಯು ಕಾರ್ಯಕರ್ತರ ಮೇಲೆ ರಾಜ್ಯ ವ್ಯಾಪಕ ದೌರ್ಜನ್ಯವೆಸಗುತ್ತಿದ್ದಾರೆಂದೂ ಅದನ್ನು ಪ್ರತಿಭಟಿಸಿ ಮಾರ್ಚ್ ನಡೆಸಲಾಗಿದೆ.
ಬದಿಯಡ್ಕ ಠಾಣೆಗೆ ನಡೆದ ಮಾರ್ಚನ್ನು ಎಣ್ಮಕಜೆ ಪಂ. ಅಧ್ಯಕ್ಷ ಜೆ.ಎಸ್. ಸೋಮಶೇಖರ್ ಉದ್ಘಾಟಿಸಿದರು. ಕುಂಬ್ಡಾಜೆ, ಬದಿಯಡ್ಕ, ಎಣ್ಮಕಜೆ ಪಂಚಾಯತ್‌ಗಳ ಜಂಟಿ ಆಶ್ರಯದಲ್ಲಿ ಮಾರ್ಚ್ ನಡೆದಿದೆ. ಶ್ಯಾಂ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ನಾರಾಯಣ ಮಣಿಯಾಣಿ, ಗಾಂಭೀರ್, ಆನಂದ ಮವ್ವಾರ್, ಕರುಣಾಕರನ್ ನಂಬ್ಯಾರ್, ಅಬ್ಬಾಸ್ ಎಲಿಜಬೆತ್, ಜಯಶ್ರೀ ಸಹಿತ ಹಲವರು ಭಾಗವಹಿಸಿದರು. ಕುಂಬಳೆ ಪೊಲೀಸ್ ಠಾಣೆಗೆ ನಡೆದ ಮಾರ್ಚ್‌ನ್ನು ಠಾಣೆ ಸಮೀಪ ಪೊಲೀಸರು ಬಾರಿಕೇಡ್ ಇರಿಸಿ ತಡೆದರು. ಮಾರ್ಚ್‌ನ್ನು ಮಂಜುನಾಥ ಆಳ್ವ ಉದ್ಘಾಟಿಸಿದರು. ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಬ್ಲೋಕ್, ಮಂಡಲ ಪದಾಧಿಕಾರಿಗಳು ಮಾತನಾಡಿದರು