ಜೀವ, ಸೊತ್ತು ಸಂರಕ್ಷಣೆ ಆಗ್ರಹಿಸಿ ಕೃಷಿಕರಿಂದ ಅರಣ್ಯಾಧಿಕಾರಿ ಕಚೇರಿ ದಿಗ್ಬಂಧನ
ಕಾಸರಗೋಡು: ಕೃಷಿಕರ ಜೀವ ಹಾಗೂ ಸೊತ್ತಿಗೆ ಸಂರಕ್ಷಣೆ ನೀಡಬೇಕೆಂದು ಆಗ್ರಹಿಸಿ ಕರ್ಷಕ ಸಂಘ ನೇತೃತ್ವದಲ್ಲಿ ಅರಣ್ಯ ಇಲಾಖೆ ಜಿಲ್ಲಾ ಅಧಿಕಾರಿಯ ಕಚೇರಿಯನ್ನು ದಿಗ್ಬಂಧನ ಗೊಳಿಸಲಾಯಿತು. ಕೇಂದ್ರ ಸರಕಾರ ಅರಣ್ಯ- ವನ್ಯಜೀವಿ ಕಾನೂನಿನಲ್ಲಿ ಕೃಷಿಕರಿಗೆ ಅನುಕೂಲವಾದ ಕಾನೂನು ತಿದ್ದುಪಡಿ ಮಾಡಬೇಕು, ಕಾಡು ಪ್ರಾಣಿಗಳ ಆಕ್ರಮಣದಿಂದ ಕೃಷಿಕರಿಗೆ ಉಂಟಾದ ಜೀವಹಾನಿ, ಬೆಳೆನಾಶ ಎಂಬಿವುಗಳಿಗೆ ಅರ್ಹವಾದ ನಷ್ಟಪರಿಹಾರ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಮಾರ್ಚ್ ಹಾಗೂ ದಿಗ್ಬಂಧನ ನಡೆಸಲಾಗಿದೆ. ಜಿಲ್ಲಾ ಕಾರ್ಯದರ್ಶಿ ಪಿ. ಜನಾರ್ದ ನನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ. ಕುಂಞಿರಾಮನ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೆ.ಆರ್. ಜಯಾನಂದ, ಚಂದ್ರಶೇಖರನ್, ಪಿ. ರವೀಂದ್ರನ್ ಮಾತನಾಡಿದರು.