ಜುಗಾರಿನಿರತ ಇಬ್ಬರ ಸೆರೆ: ಇಬ್ಬರು ಪರಾರಿ
ಕುಂಬಳೆ: ಕಾರಿಂಜೆ ದರ್ಬಾರ್ ಕಟ್ಟೆಯ ಹಿತ್ತಿಲೊಂದರಲ್ಲಿ ನಿನ್ನೆ ಸಂಜೆ ಜುಗಾರಿ ನಿರತರಾಗಿದ್ದ ಇಬ್ಬರನ್ನು ಕುಂಬಳೆ ಎಸ್‌ಐ ಟಿ.ಎಂ. ವಿಪಿನ್ ನೇತೃತ್ವದ ಪೊಲೀಸರು ಸೆರೆಹಿಡಿದಿ ದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಇಬ್ಬರು ಓಡಿ ಪರಾರಿಯಾಗಿ ದ್ದಾರೆ. ಕಾಸರಗೋಡು ಬೀರಂತ ಬೈಲು ನಿವಾಸಿ ಹರೀಶ್ ನಾಯ್ಕ್ (47), ಮುಜುಂಗಾವಿನ ಕೌಶಿಕ್ (26)ಎಂಬಿವರು ಬಂಧಿತ ವ್ಯಕ್ತಿಗ ಳೆಂದು ಪೊಲೀಸರು ತಿಳಿಸಿದ್ದಾರೆ.
ಇವರಿಂದ 4100 ರೂ. ವಶಪಡಿಸಲಾಗಿದೆ. ಪರಾರಿಯಾದ ವ್ಯಕ್ತಿಗಳ ಕುರಿತು ಸೂಚನೆ ಲಭಿಸಿದ್ದು, ಅವರಿಗಾಗಿ ಶೋಧ ಮುಂದುವರಿ ಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.