ಜೆಸ್ವಿಟ್ ಬ್ರದರ್ ಆಂಟನಿ ಕ್ರಾಸ್ತಾ ನಿಧನ
ಕಾಸರಗೋಡು : ಜೆಸ್ವಿಟ್ ಧರ್ಮ ಗುರುಗಳ ಸಂಸ್ಥೆಯ ಬ್ರದರ್ ಆಂಟನಿ ಕ್ರಾಸ್ತಾ (77) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಯ್ಯಾರು ಕೊಂದಲಕಾಡ್ ನಿವಾಸಿಯಾಗಿದ್ದು, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
1963 ರಲ್ಲಿ ಜೆಸ್ವಿಟ್ ಸಂಸ್ಥೆಗೆ ಸೇರ್ಪಡೆಗೊಂಡಿದ್ದ ಅವರಿಗೆ 1981 ರಲ್ಲಿ ಬ್ರದರ್ ದೀಕ್ಷೆ ಲಭಿಸಿತ್ತು. ಪ್ರಾರಂ ಭದ ವರ್ಷಗಳಲ್ಲಿ ಮಂಗಳೂರು, ಬೆಂಗಳೂರು ಹಾಗೂ ನಾಗಲ್ಯಾಂಡ್ ನಲ್ಲಿ ಸೇವೆ ಸಲ್ಲಿಸಿದ್ದ ಅವರು 1985 ರಲ್ಲಿ ರೋಮ್ ಗೆ ತೆರಳಿದ್ದರು. ಅಲ್ಲಿ ಜೆಸ್ವಿಟ್ ಸಂಸ್ಥೆಯ ಕೇಂದ್ರ ಕಚೇರಿಯ ಆರ್ಥಿಕ ನಿರ್ವಹಣೆ ವಿಭಾಗದಲ್ಲಿ ಸಹಾಯಕರಾಗಿ ಹಾಗೂ ಬಳಿಕ ಕಚೇರಿ ಮುಖ್ಯಸ್ಥರಾಗಿ ಒಟ್ಟು 30 ವರ್ಷ ಸೇವೆ ಸಲ್ಲಿಸಿ 2015 ರಲ್ಲಿ ಬೆಂಗಳೂರಿಗೆ ವಾಪಸಾಗಿದ್ದರು. ಮಂ ಗಳೂರಿನ ಫಾತಿಮಾ ರಿಟ್ರೀಟ್ ಹೌಸ್ ನ ‘ಸಂತೃಪ್ತಿ’ ನಿವಾಸದಲ್ಲಿ ಔ್ಣ್ಠ್ರ¥್ಣ 3 È್ಣ್ಗ್ಣ%ಪಿಒ¥್ಣ ವಾಸ ಮಾಡುತ್ತಿದ್ದರು. ರೋಮ್ ನಲ್ಲಿದ್ದ ಸಂದರ್ಭದಲ್ಲಿ ಕೊಂಕಣಿ ಸಂಘವನ್ನು ಸ್ಥಾಪಿಸಿ ವಿವಿಧ ಚಟುವಟಿಕೆಗಳನ್ನು ನಡೆಸಿದ್ದರು. ರೋಮ್ ನಲ್ಲಿ ತಮ್ಮ ಮೂರು ದಶಕಗಳ ಸೇವಾವಧಿಯಲ್ಲಿ ಮೂವರು ಪೋಪ್ ಸ್ವಾಮಿಗಳ ಆಡಳಿತವನ್ನು ಹತ್ತಿರದಿಂದ ಕಾಣುವ ಅಪರೂಪದ ಅವಕಾಶ ಅವರಿಗೆ ಲಭಿಸಿತ್ತು.