ಜೈಲಿನಿಂದ ಹೊರಬಂದ ಕುಖ್ಯಾತ ಕಳ್ಳರು: ಪೊಲೀಸರಿಂದ ಎರಡು ಸ್ಕ್ವಾಡ್ ರೂಪೀಕರಣ
ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವಿವಿಧ ಕಡೆಗಳಲ್ಲಿ ವ್ಯಾಪಕ ಕಳವು ಕೃತ್ಯ ನಡೆದಿದ್ದು ಇದರಿಂದ ಜನತೆ ತೀವ್ರ ಆತಂಕಗೊಂಡಿರುವಾಗಲೇ ಕುಖ್ಯಾತ ಕಳ್ಳರು ಜೈಲಿನ ಹೊರಗೆ ಇದ್ದಾರೆಂಬ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ವ್ಯಾಪಕ ಕಳವು ನಡೆಯಲು ಸಾಧ್ಯತೆ ಇದೆಯೆಂದು ಗುಪ್ತಚರ ತನಿಖಾ ತಂಡ ತಿಳಿಸಿದೆ. ಪಯ್ಯನ್ನೂರು ನಿವಾಸಿಯಾದ ವಿಜಯನ್ ಎಂಬ ಹೆಸರಲ್ಲಿ ಕರೆಯಲ್ಪಡುವ ವ್ಯಕ್ತಿ ವಿವಿಧ ಹಲವು ಪ್ರಕರಣಗಳಲ್ಲಿ ಆರೋಪಿಯಾ ಗಿದ್ದಾನೆ. ಕಳವು ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗಿ ಜೈಲಿನಲ್ಲಿದ್ದ ಈತ ಇತ್ತೀಚೆಗೆ ಬಿಡುಗಡೆಗೊಂ ಡಿದ್ದಾನೆ. ಕಾಞಂಗಾಡ್‌ನಲ್ಲಿ ಮಡಿಯನ್ ಎಂಬ ಹೆಸರಲ್ಲಿ ಕುಖ್ಯಾತಿ ಹೊಂದಿರುವ ವ್ಯಕ್ತಿಯೂ ಹಲವು ಪ್ರಕರಣಗಳಲ್ಲಿ ಆರೋಪಿಯಾ ಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತನೂ ಕೆಲವು ದಿನಗಳ ಹಿಂದೆ ಯಷ್ಟೇ ಜೈಲಿನಿಂದ ಬಿಡುಗಡೆಗೊಂ ಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸುತ್ತಿವೆ. ಈ ಇಬ್ಬರ ಹೊರತು ಇನ್ನೂ ಹಲವು ಕಳ್ಳರು ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಆದ್ದರಿಂದ ಜಿಲ್ಲೆಯ ವಿವಿಧೆಡೆ ಕಳವು ನಡೆಯುವ ಸಾಧ್ಯತೆ ಇದೆಯೆಂದು ಗುಪ್ತಚರ ತನಿಖಾ ವಿಭಾಗ ಮುನ್ನೆಚ್ಚರಿಕೆ ನೀಡಿದೆ. ಇತ್ತೀಚೆಗಿನಿಂದ ಕಳವು ಪ್ರಕರಣ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸರ ಎರಡು ಸ್ಕ್ವಾಡ್‌ಗಳನ್ನು ರಚಿಸಲಾಗಿ ದೆ. ಕಾಸರಗೋಡು ಹಾಗೂ ಕಾಞಂ ಗಾಡ್ ಡಿವೈಎಸ್ಪಿಗಳ ನೇತೃತ್ವದಲ್ಲಿ ಸ್ಕ್ವಾಡ್ ಕಾರ್ಯಾಚರಿಸಲಿದೆ. ರಾತ್ರಿ ಹೊತ್ತಿನಲ್ಲಿ ಪೊಲೀಸ್ ಪಟ್ರೋಲಿಂಗ್ ಕೂಡಾ ತೀವ್ರಗೊಳಿಸಲು ನಿರ್ಧರಿಸಲಾಗಿದೆ.