ಜೈಹಿಂದ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ಗಳಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ
ಕಾಸರಗೋಡು: ಸೂರ್ಲು ಜೈಹಿಂದ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ನ ಆಶ್ರಯದಲ್ಲಿ ಕಾಸರಗೋಡು ನಗರಸಭೆಯ 7ನೇ ವಾರ್ಡ್ ಹಾಗೂ ಮಧೂರು ಪಂಚಾಯತ್ನ 11, 7ನೇ ವಾರ್ಡ್ಗಳಲ್ಲಿ ಎಸ್ಎಸ್ಎಲ್ಸಿ, ಪ್ಲಸ್-ಟು ಪರೀಕ್ಷೆಗೆ ಸಂಪೂರ್ಣ ಎ ಪ್ಲಸ್ ಹಾಗೂ ಸಿಬಿಎಸ್ಇ ಪರೀಕ್ಷೆ ಗಳಲ್ಲಿ ೮೫ ಶೇ.ಕ್ಕಿಂತ ಅಂಕ ಪಡೆದು ಜಯ ಗಳಿಸಿದ ವಿದ್ಯಾರ್ಥಿ ಗಳನ್ನು ಅಭಿನಂದಿಸಲಾಯಿತು. ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃತಿಕ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ಪದ್ಮನಾಭ ಸೂರ್ಲು ಅಧ್ಯಕ್ಷತೆ ವಹಿಸಿದರು. ಬಿಇಎಂ ಶಾಲೆಯ ಮುಖ್ಯೋಪಾಧ್ಯಾಯ ಗಣೇಶ್, ರಾಧಾಕೃಷ್ಣ ಸೂರ್ಲು, ವರಪ್ರಸಾದ್ ಕೋಟೆಕಣಿ ಅತಿಥಿಗಳಾಗಿ ಭಾಗವಹಿಸಿ ದರು. ರಘುರಾಮ ಸೂರ್ಲು ನಿರ್ವಹಿಸಿ ದರು. ಕ್ಲಬ್ ಕಾರ್ಯದರ್ಶಿ ಶ್ರಿಜೇಶ್ ರೈ ಸ್ವಾಗತಿಸಿ, ಸುಕುಮಾರ ಕೂಡ್ಲು ವಂದಿಸಿದರು.