ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ೮೦ನೇ ಯೋಜನೆ ಹಸ್ತಾಂತರ
ಮಂಜೇಶ್ವರ: ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ೮೦ನೇ ಯೋಜನೆಯ ಸಹಾಯಧನ ಹಸ್ತಾಂತರ ಫಲಾನುಭವಿಗಳ ಮನೆಯಲ್ಲಿ ಜರಗಿತು.ವರ್ಕಾಡಿ ಪಂಚಾಯತ್‌ನ, ಕೊಡ್ಲಮೊಗರು ಮುಗುಳಿ ನಿವಾಸಿ ನವ್ಯ ಶೆಟ್ಟಿಳಿಗೆ _P}್ತ್ಜ ಸಲುವಾಗಿ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಗಿರೀಶ್ ಮುನ್ನಿಪ್ಪಾಡಿ ಹಸ್ತಾಂತರಿಸಿದರು. ಈ ವೇಳೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸನತ್ ಮಯ್ಯ, ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ, ಸಂಚಾಲಕ ಸುಕೇಶ್ ಬೆಜ್ಜ, ಸದಸ್ಯರಾದ ಮಮತ ಕೊಡ್ಲಮೊಗರು, ಸ್ಥಳೀಯ ವಾರ್ಡ್ ಪ್ರತಿನಿದಿs ಮಮತ ಕೋಣಿಬೈಲು ಉಪಸ್ಥಿತರಿದ್ದರು.