ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ 8ನೇ ವಾರ್ಷಿಕೋತ್ಸವ
ಮಂಜೇಶ್ವರ: ಜೈ ಶ್ರೀರಾಮ್ ಸಮಾಜಸೇವಾ ಸಂಸ್ಥೆ ಮಂಜೇಶ್ವರ ಇದರ 8ನೇ ವಾರ್ಷಿಕೋತ್ಸವ ಇಂದು ಬೆಳಿಗ್ಗೆ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಜರಗಿತು. ಸಂಸ್ಥೆಯ ಸದಸ್ಯ ಸನತ್ ಮಯ್ಯ ಪ್ರಾರ್ಥನೆ ಹಾಡಿದರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಗೌರವಾಧ್ಯಕ್ಷ ನ್ಯಾಯವಾದಿ ನವೀನ್ರಾಜ್ ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಅರ್ಹ ಫಲಾನು ಭವಿಗಳಿಗೆ ಕಿಟ್ ವಿತರಿಸಲಾಯಿತು. ಯಾದವ ಕೀರ್ತೇಶ್ವರ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸರಸ್ವತಿ ಟೀಚರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೋಹನ್ ಶೆಟ್ಟಿ ತೂಮಿನಾಡು, ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಗಿರೀಶ್ ಮನ್ನಿಪ್ಪಾಡಿ ಪ್ರಸ್ತಾಪಿಸಿದರು. ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ ಲೆಕ್ಕಪತ್ರ, ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸನತ್ ಮಯ್ಯ ಸ್ವಾಗತಿಸಿ, ಸದಸ್ಯ ರೂಪೇಶ್ ಜೋಡುಕಲ್ಲು ವಂದಿಸಿದರು. ದೇವಿಪ್ರಸಾದ್ ಬೆಜ್ಜ ನಿರೂಪಿಸಿದರು.