ಜೋಡುಕಲ್ಲಿನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ
ಪೈವಳಿಕೆ: ಜೋಡುಕಲ್ಲು 114ನೇ ಬೂತ್ ಬಿಜೆಪಿ ಸಮಿತಿ ನೇತೃತ್ವದಲ್ಲಿ ಮಾಜಿ ಪ್ರಧಾನಿ ದಿ| ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ವರ್ಷದ ಹುಟ್ಟು ಹಬ್ಬವನ್ನು ಇಂದು ಬೆಳಿಗ್ಗೆ ಆಚರಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯ ಪ್ರಸಾದ್ ರೈ ಕಯ್ಯಾರು ಧ್ವಜಾರೋಹಣಗೈದರು. ಪಂಚಾಯತ್ ಸಮಿತಿ ಅಧ್ಯಕ್ಷ ಲೋಕೇಶ್ ನೋಂಡಾ ಪುಷ್ಪಾರ್ಚನೆ ಗೈದರು. ಬೂತ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಟ್ಲ, ಸನತ್ ಕುಮಾರ್ ರೈ, ಸದಾಶಿವ ಶೆಟ್ಟಿ, ಕಿರಣ್ ಕೆ.ಪಿ., ಪ್ರಶಾಂತ್ ಪಚ್ಚು, ಗಿರೀಶ್, ಚಂದ್ರಶೇಖರ, ಹರೀಶ್, ಕೋಟಿ, ದಿತೇಶ್ ಸಹಿತ ಹಲವರು ಭಾಗವಹಿಸಿದರು.