ಜೋಡುಕಲ್ಲು- ಪರಂಬಳ ರಸ್ತೆ ಹದಗೆಟ್ಟು ಶೋಚನೀಯ: ದುರಸ್ತಿಗೆ ಒತ್ತಾಯ
ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಜೋಡುಕಲ್ಲು-ಪರಂಬಳ ಲೊಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಹದಗೆಟ್ಟು ಶೋಚನೀಯ ವಸ್ಥೆಯಲ್ಲಿದ್ದು, ಸಂಚಾರ ದುಸ್ತರವಾ ಗಿರುವುದಾಗಿ ಸಾರ್ವಜನಿಕರು ದೂರಿ ದ್ದಾರೆ. ಸುಮಾರು ೪ ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಮೂರು ಕಿಲೋ ಮೀಟರ್ ರಸ್ತೆ ಅಲ್ಲಲ್ಲಿ ಶೋಚನೀಯ ವಸ್ಥೆಯಲ್ಲಿದೆ. ಡಾಮಾರು, ಜಲ್ಲಿಕಲ್ಲುಗಳು ಎದ್ದು ಹೊಂಡ ಸೃಷ್ಟಿಯಾಗಿದೆ. ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗುತ್ತಿದೆ. ಜೊಡುಕಲ್ಲುನಿಂದ ಪರಂಬಳ ಸಹಿತ ವಿವಿಧ ಕಡೆ ಹತ್ತಿರದ ರಸ್ತೆ ಇದಾಗಿದೆ.. ಕೂಡಲೇ ಈ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.