ಜ್ವರಬಾಧಿಸಿ ಚಿಕಿತ್ಸೆಗೆ ತಲುಪಿದ ಬಾಲಕಿಗೆ ಕಿರುಕುಳ: ನಿವೃತ್ತ ವೈದ್ಯನ ವಿರುದ್ಧ ಕೇಸು
ಹೊಸದುರ್ಗ: ಜ್ವರ ಬಾಧಿಸಿ ಚಿಕಿತ್ಸೆಗಾಗಿ ತಲುಪಿದ ಹದಿಮೂರರ ಹರೆಯದ ಬಾಲಕಿಗೆ ನಿವೃತ್ತ ವೈದ್ಯ ಕಿರಕುಳ ನೀಡಿದ ಬಗ್ಗೆ ದೂರಲಾಗಿದೆ. ತೃಕ್ಕರಿಪುರದ ನಿವೃತ್ತ ವೈದ್ಯ ಸಿ.ಕೆ.ಪಿ ಕುಂಞಬ್ದುಲ್ಲ ಎಂಬಾತನ ವಿರುದ್ಧ ಬಾಲಕಿ ಚಂದೇರ ಪೊಲೀಸರಿಗೆ ದೂರು ನೀಡಿದ್ದಾಳೆ. ಇದರಂತೆ ಪೊಲೀಸರು ವೈದ್ಯನ ವಿರುದ್ಧ ಪೋಕ್ಸೋ ಕೇಸು ದಾಖಲಿಸಿಕೊಂಡಿ ದ್ದಾರೆ. ಕೆಲವು ದಿನಗಳ ಹಿಂದೆ ಬಾಲಕಿ ಚಿಕಿತ್ಸೆಗಾಗಿ ವೈದ್ಯನ
ಕ್ಲಿನಿಕ್ಗೆ ತಲುಪಿದ್ದಳು. ತಪಾಸಣೆ ವೇಳೆ ವೈದ್ಯ ಬಾಲಕಿಯನ್ನು ಬಿಗಿದಪ್ಪಿಕೊಂಡಿರುವುದಾಗಿ ದೂರಲಾಗಿದೆ.