ಟಿ.ಎನ್. ಪ್ರತಾಪನ್‌ರನ್ನು ಕೆಪಿಸಿಸಿ ಕಾರ್ಯನಿರ್ವಹಣಾ ಅಧ್ಯಕ್ಷರನ್ನಾಗಿ ನೇಮಕ
ತಿರುವನಂತಪುರ: ತ್ರಿಶೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲು ಸಕಲ ಪೂರ್ವಬಾವಿ ಸಿದ್ಧತೆಯಲ್ಲೇ ತೊಡಗಿದ್ದ ವೇಳೆಯಲ್ಲಿ ದಿಢೀರ್ ಆಗಿ ಟಿಕೆಟ್ ನಿರಾಕರಿಸಿದುದರಿಂದ ತೀವ್ರ ಹತಾಶರಾಗಿದ್ದ ಈ ಕ್ಷೇತ್ರದ ಹಾಲಿ ಸಂಸದ ಟಿ.ಎನ್. ಪ್ರತಾಪನ್‌ರನ್ನು ಕಾಂಗ್ರೆಸ್ ರಾಜ್ಯ ಸಮಿತಿ (ಕೆಪಿಸಿಸಿ)ಯ ಕಾರ್ಯ ನಿರ್ವಹಣಾ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇಮಿಸಿದ್ದಾರೆ.ಸಂಸದ ಕೊಡಿಕುನ್ನಿಲ್ ಸುರೇಶ್ ಮತ್ತು ಶಾಸಕ ಟಿ. ಸಿದ್ದೀಕ್‌ರನ್ನು ಜ್ಯಾರಿಯಲ್ಲಿ ಕೆಪಿಸಿಸಿ ಕಾರ್ಯನಿರ್ವಹಣಾ ಅಧ್ಯಕ್ಷರುಗಳಾಗಿದ್ದು, ಅವರ ಹೊರತಾಗಿ ಈಗ ಟಿ.ಎನ್. ಪ್ರತಾಪ್‌ರಿಗೂ ಆ ಸ್ಥಾನ ನೀಡಲಾಗಿದೆ