ಟೈಲರ್ಸ್ ಯೂನಿಯನ್ ಉಪ್ಪಳ ಯೂನಿಟ್ ಸಮಾವೇಶ
ಉಪ್ಪಳ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ಕೆ.ಎಸ್.ಟಿ.ಎ) ಉಪ್ಪಳ ಯೂನಿಟ್ ಸಮÁವೇಶ ಉಪ್ಪಳ ಕೈಕಂಬ ಪಂಚಮಿ ಹಾಲ್‌ನಲ್ಲಿ ನಡೆಯಿತು. ಉಪ್ಪಳ ಯೂನಿಟ್ ಅಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಕಾರ್ಯದರ್ಶಿ ಮೋಹನ್ ದಾಸ್ ಕುಂಬಳೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್, ಮಂಜೇಶ್ವರ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ ಆಚಾರ್ಯ, ತಾಲೂಕು ಉಪಾ ಧ್ಯಾಕ್ಷ ಕೇಶವ ಮಯ್ಯ, ಮಂಜೇಶ್ವರ ಯೂನಿಟ್ ಕಾರ್ಯದರ್ಶಿ ಪುರುಷೋ ತ್ತಮ ಬಾಯಿಕಟ್ಟೆ ಉಪ್ಪಸ್ಥಿತರಿದ್ದರು. ಕಾರ್ಯ ದರ್ಶಿ ಸುರೇಖ ಯು. ವರದಿ ಮಂಡಿಸಿ ದರು. ಯೂನಿಟ್ ಖಜಾಂಚಿ ಮೋಹನ್ ಎಂ. ಲೆಕ್ಕಪತ್ರ ಮಂಡಿಸಿದರು.