ಡಯಟ್ ನೌಕರರಿಗೆ ಕೂಡಲೇ ವೇತನ ಮಂಜೂರು ಮಾಡಬೇಕು-ಎನ್‌ಜಿಒ ಸಂಘ್
ಕಾಸರಗೋಡು: ಕೇರಳದ ಡಯಟ್‌ಗಳಲ್ಲಿ ಕೆಲಸ ಮಾಡುವ ನೌಕರರಿಗೆ, ಅಧ್ಯಾಪಕರಿಗೆ ವೇತನ ನಿಷೇಧಿಸಿದ ಸರಕಾರದ ಕ್ರಮ ಪ್ರತಿಭಟನಾರ್ಹವಾಗಿದೆ ಎಂದು ಡಯಟ್ ನೌಕರರಿಗೆ ವೇತನ ಕೂಡಲೇ ವಿತರಿಸಲಿರುವ ಕ್ರಮ ಉಂಟಾಗಬೇಕೆಂದು ಕೇರಳ ಎನ್‌ಜಿಒ ಸಂಘ್ ರಾಜ್ಯ ಕಾರ್ಯದರ್ಶಿ ವಿಜಯನ್ ಸಿ. ಆಗ್ರಹಿಸಿದ್ದಾರೆ. ಡಯಟ್ ನೌಕರರ ಬಗ್ಗೆ ಸರಕಾರ ತೋರುವ ಅವಗಣನೆಯನ್ನು ಕೊನೆಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇರಳ ಎನ್‌ಜಿಒ ಸಂಘ್ ಜಿಲ್ಲಾ ಸಮಿತಿ ಸಿವಿಲ್ ಸ್ಟೇಷನ್‌ನಲ್ಲಿ ನಡೆಸಿದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾ ಅಧ್ಯಕ್ಷ ರಂಜಿತ್ ಕೆ. ಅಧ್ಯಕ್ಷತೆ ವಹಿಸಿದರು. ಪಿ. ಪೀತಾಂಭರನ್, ಶ್ಯಾಮ್‌ಪ್ರಸಾದ್ ವಿ, ಸಂತೋಷನ್ ವಿ.ಕೆ., ರವೀಂದ್ರನ್ ಕೊಟ್ಟೋಡಿ, ತುಳಸೀಧರನ್, ವರದನ್, ಸತೀಶ್ ಸಾಲಿಯಾನ್, ವಿಶಾಲಾಕ್ಷನ್, ವಿಶ್ವನಾಥ ನಾಯ್ಕ್, ಸೆನಿತ್ ಕುಮಾರ್, ಹರಿಪ್ರಸಾದ್, ಸಚಿನ್ ಕುಮಾರ್ ಮಾತನಾಡಿದರು.