ಡಾ| ಜನಾರ್ದನ ನಾಯ್ಕ್‌ರಿಗೆ ಸನ್ಮಾನ
ಕಾಸರಗೋಡು: ವೈದ್ಯಕೀಯ ಕ್ಷೇತ್ರದಲ್ಲಿ ಅನರ್ಘ್ಯ ಸೇವೆ ಸಲ್ಲಿಸಿ ಜನಪ್ರಿಯರಾಗಿ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಡಾ. ಎನ್.ಎನ್. ಅಶೋಕನ್ ಸ್ಮಾರಕ ಉಪನ್ಯಾಸ ಪ್ರಶಸ್ತಿ ಪಡೆದ ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ನುಳ್ಳಿಪ್ಪಾಡಿ ನಿವಾಸಿ ಡಾ| ಸಿ.ಎಚ್. ಜನಾರ್ದನ ನಾಯ್ಕ್‌ರಿಗೆ ಕಾಸರಗೋಡು ಚೆಸ್ಟ್ ಸೊಸೈಟಿಯ ವತಿಯಿಂದ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಕಾಸರಗೋಡು ಸಿ.ಟಿ. ಟವರ್‌ನಲ್ಲಿ ನಡೆದ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ. ಅಬ್ದುಲ್ ಸತ್ತಾರ್ ಅಧ್ಯಕ್ಷತೆ ವಹಿಸಿದರು. ಹಿರಿಯ ವೈದ್ಯರಾದ ಡಾ| ಯತೀಶ್, ಡಾ| ನಾರಾಯಣ ನಾಯ್ಕ್, ಐ.ಎಂ.ಎ. ಅಧ್ಯಕ್ಷ ಡಾ| ಜಿತೇಂದ್ರ ರೈ ಶುಭಾಶಂಸನೆಗೈದರು. ಡಾ| ನಾರಾಯಣ ಪ್ರದೀಪ ಸ್ವಾಗತಿಸಿ, ಡಾ| ರಮ್ಯಾ ವಂದಿಸಿದರು.