ಡಾ| ಜನಾರ್ದನ ನಾಯ್ಕ್ ರಿಗೆ ಗೌರವ
ಕಾಸರಗೋಡು: ಇಂಡಿಯನ್ ಅಸೋಸಿಯೇಶನ್ ಆಫ್ ಫಿಸೀಶ್ಯನ್ನ ಡಾ| ಎನ್.ಎನ್. ಅಶೋಕನ್ ಸ್ಮಾರಕ ಆಪರೇಶನ್ ಪ್ರಶಸ್ತಿ ಗಳಿಸಿದ ಡಾ|ಜನಾರ್ದನ ನಾಯ್ಕ್ ಸಿ.ಎಚ್ ರನ್ನು ಕಾಸರಗೋಡು ಜನರಲ್ ಆಸತ್ರೆಯ ಕನ್ನಡ ಒಕ್ಕೂಟ ಗೌರವಿಸಿದೆ. ಡೆಪ್ಯುಟಿ ಸುಪರಿನ್ ಟೆಂಡೆಂಟ್ ಡಾ| ಜಮಾಲ್ ಮುಖ್ಯ ಅತಿಥಿಯಾಗಿದ್ದರು. ಡಾ| ನಾರಾಯಣ ಪ್ರದೀಪ್ ಅಧ್ಯಕ್ಷತೆ ವಹಿಸಿದರು. ಕೆಜಿಎಂಒಎ ಮಾಜಿ ಅಧ್ಯಕ್ಷ ಡಾ| ಬಿ. ನಾರಾಯಣ ನಾಯ್ಕ್, ಸ್ಟಾಫ್ ಕೌನ್ಸಿಲ್ ಅಧ್ಯಕ್ಷ ಡಾ| ಸುನಿಲ್ ಚಂದ್ರನ್, ನರ್ಸಿಂಗ್ ಸುಪರಿನ್ಟೆಂಡೆಂಟ್ ಮಿನಿ ಮ್ಯಾಥ್ಯೂ, ವಿಜೇಶ್, ಬಾಲಸುಬ್ರಹ್ಮಣ್ಯ, ಡಾ|ವಸಂತಿ, ಡಾ| ಧನಂಜಯ, ಭುವನೇಶ್ವರಿ, ನಾರಾಯಣ ಬಾರಡ್ಕ, ಕಿಶೋರ್ ಮಾತನಾಡಿದರು.