ಡಾ| ಜನಾರ್ಧನ ನಾಯ್ಕ್‌ರಿಗೆ ಫೆಲೋಶಿಪ್

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ಫಿಸಿಶಿ ಯನ್ ಡಾ| ಜನಾರ್ದನ ನಾಯ್ಕ್  ಸಿ.ಎಚ್.ರಿಗೆ ಐಎಂಎಯ ಅಕಾಡೆಮಿ ಆಫ್ ಮೆಡಿಕಲ್ ಸ್ಪೆಷಾಲಿಟಿಯ ಫೆಲೋಶಿಪ್ ಲಭಿಸಿದೆ. ಭುವನೇಶ್ವರ ದಲ್ಲಿ ನಡೆದ ಅಕಾಡೆಮಿ ಆಫ್ ಮೆಡಿಕಲ್ ಸ್ಪೆಷಾಲಿಟಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ| ಆರ್.ವಿ. ಅಶೋಕನ್ ಡಾ| ಜನಾರ್ದನ ನಾಯ್ಕ್‌ರಿಗೆ ಪ್ರಶಸ್ತಿ ಪ್ರದಾನಗೈದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅನೇಕ ವೈದ್ಯಕೀಯ ಮಂಡಿಸುತ್ತಿರುವ ಡಾ| ಜನಾರ್ದನ್ ನಾಯ್ಕ್‌ಅವರು ಈ ಗೌರವ ಪಡೆದ ಕಾಸರಗೋಡು ಜಿಲ್ಲೆಯ ಪ್ರಥಮ ವೈದ್ಯರಾಗಿದ್ದಾರೆ. ಮೂಲತಃ ಮಾನ್ಯಕ್ಕೆ ಸಮೀಪದ ಚುಕ್ಕಿನಡ್ಕ ನಿವಾಸಿಯಾಗಿ ರುವ ಡಾ| ಜನಾರ್ಧನ್ ನಾಯ್ಕ್ ಮಾನ್ಯ ಜ್ಞಾನೋದಯ ಶಾಲೆಯ ಹಾಗೂ ಬದಿಯಡ್ಕ ನವ ಜೀವನ ಶಾಲೆಯ ಹಳೇ ವಿದ್ಯಾರ್ಥಿ ಯಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page