ಡಾ| ವಂದನಾದಾಸ್ ಕೊಲೆ ಪ್ರಕರಣ :ಸಿಬಿಐ ತನಿಖೆ ಇಲ್ಲ: ಜಾಮೀನುಕೋರಿ ಆರೋಪಿ ಸಲ್ಲಿಸಿದ ಅರ್ಜಿ ವಜಾ
ಕೊಚ್ಚಿ: ಕೊಟ್ಟಾರಕರೆ ತಾಲೂಕು ಆಸ್ಪತ್ರೆಯ ಹೌಸ್ ಸರ್ಜನ್ ಡಾ| ವಂದನಾದಾಸ್ ಕೊಲೆ ಪ್ರಕರಣ ತನಿಖೆಯನ್ನು ಸಿಬಿಐಗೆ ಹಸ್ತಂತರಿ ಬೇಕೆಂದು ಕೋರಿ ಅವರ ಕುಟುಂ ಬದವರು ಸಲ್ಲಿಸಿದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಇಂದು ಬೆಳಿಗ್ಗೆ ತಳ್ಳಿಹಾಕಿದೆ.
ಪ್ರಸ್ತುತ ಕೊಲೆ ಪ್ರಕರಣದ ಪೊಲೀಸ್ ತನಿಖೆ ಈಗ ಸರಿಯಾದ ರೀತಿಯಲ್ಲೇ ಮುಂದುವರಿಯುತ್ತಿದೆ. ಆದ್ದರಿಂದ ಈ ಪ್ರಕರಣದ ತನಿಖೆ ಯನ್ನು ಸಿಬಿಐಗೆ ಹಸ್ತಾಂತರಿಸುವ ಅಗತ್ಯವಿಲ್ಲವೆಂದು ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ನ್ಯಾಯಾ ಮೂರ್ತಿ ಕುgನ್ ಥೋಮಸ್ ಅವರು ಇಂದು ಬೆಳಿಗ್ಗೆ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವ ಯಾವುದೇ ಅಗತ್ಯವಿಲ್ಲವೆಂದು ರಾಜ್ಯ ಸರಕಾರ ತನ್ನ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಿತ್ತು. ತನಿಖೆ ವಿಷಯದಲ್ಲಿ ಡಾ| ವಂದನಾದಾಸ್ರ ಮನೆಯವ ರಿಗೆ ಯಾವುದಾದರೂ ದೂರುಗಳಿ ದ್ದಲ್ಲಿ ಅದನ್ನು ಪರಿಶೀಲಿಸಲು ಸಿದ್ಧವೆಂದೂ ಸರಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಅದನ್ನೂ ಪರಿಶೀಲಿಸಿ ನ್ಯಾಯಾಲಯ ಕೊನೆಗೆ ಈ ತೀರ್ಪ ನೀಡಿದೆ. ಕೊಲೆ ಪ್ರಕರಣದ ತನಿಖೆ ಸರಿಯಾದ ದೀರಿಯಲ್ಲಿ ನಡೆಯು ತ್ತಿಲ್ಲವೆಂದೂ ಆದ್ದರಿಂದ ತನಿಖೆ ಯನ್ನು ಸಿಬಿಐಗೆ ಹಸ್ತಾಂತರಿಸಬೇ ಕೆಂದು ಡಾ| ವಂದನಾದಾಸ್ರ ತಂದೆ ಕೆ.ಜಿ. ಮೋಹನ್ದಾಸ್ ಮತ್ತು ತಾಯಿ ಬಿ. ವಸಂತಿ ಕುಮಾರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ವಿನಂತಿಸಿ ಕೊಂಡಿದ್ದರು.
ಕಳೆದ ವರ್ಷ ಮೇ ೧೦ರಂದು ರಾತ್ರಿ ವೈದ್ಯಕೀಯ ತಪಾಸಣೆಗಾಗಿ ಸಂದೀಪ್ ಎಂಬಾತನನ್ನು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಗೆ ಕರೆತಂದಿದ್ದರು. ಆ ವೇಳೆ ಆತ ಡಾ| ವಂದನಾದಾಸ್ರನ್ನು ಇರಿದು ಕೊಲೆಗೈದಿರುವುದಾಗಿ ಆರೋಪಿಸ ಲಾಗಿದೆ. ಅದಕ್ಕೆ ಸಂಬಂಧಿಸಿ ಬಂಧಿತ ನಾದ ಆರೋಪಿ ಸಂದೀಪ್ನನ್ನು ಪೊಲೀಸರು ಬಂಧಿಸಿದ್ದರು. ಅಂದಿನಿಂದ ಆತ ಈಗಲೂ ನ್ಯಾಯಾಂಗ ಬಂಧನದಲ್ಲೇ ಕಳೆಯುತ್ತಿದ್ದಾನೆ. ತನಗೆ ಜಾಮೀನ ಮಂಜೂರು ಮಾಡಬೇ ಕೆಂದು ಕೋರಿ ಆರೋಪಿ ಸಂದೀಪ್ ಅರ್ಜಿ ಸಲ್ಲಿಸಿದ್ದು, ಅದನ್ನೂ ಹೈಕೋರ್ಟ್ ಇನ್ನೊಂದೆಡೆ ತಿರಸ್ಕರಿಸಿ ಆತನಿಗೆ ಜಾಮೀನು ನೀಡಲು ನಿರಾಕರಿಸಿದೆ.