ಡಿಸೆಂಬರ್‌ನೊಳಗಾಗಿ ತಲಪ್ಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಿರ್ಮಾಣ ಪೂರ್ಣ ಸಜ್ಜು
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ-೬೬ ಷಟ್ಪಥ ಅಭಿವೃದ್ಧಿ ಯೋಜನೆ 2024 ಡಿಸೆಂಬರ್‌ನೊಳ ಗಾಗಿ ಪೂರ್ಣಗೊಂಡು ಆ ಮೂಲಕ ಅದನ್ನು ಪೂರ್ಣವಾಗಿ ಸಾರಿಗೆ ಸಂಚಾರಕ್ಕೆ ತೆರೆದುಕೊಡಲಾಗುವುದು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಒಂದನೇ ರೀಚ್‌ನಲ್ಲಿ ಒಳಪಡಿಸಿ ತಲಪ್ಪಾಡಿಯಿಂದ ಆರಂಭಗೊಂಡು ಚೆಂಗಳ ತನಕದ ೩೯ ಕಿಲೋ ಮೀಟರ್ ರಸ್ತೆಯನ್ನು ಷಟ್ಪಥವಾಗಿ ಅಭಿವೃದ್ಧಿಗೊಳಿಸುವ ಕೆಲಸ ಈಗ ಭರದಿಂದ ಸಾಗುತ್ತಿದೆ. ಇದು ಒಟ್ಟು 1703 ಕೋಟಿ ರೂ. ವೆಚ್ಚ ತಗಲುವ ಬೃಹತ್ ಯೋಜನೆ ಯಾಗಿದೆ. ಊರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ-ಆಪರೇಟಿವ್ಸ್ ಸೊಸೈಟಿ ಇದರ ನಿರ್ಮಾಣ ಗುತ್ತಿಗೆ ವಹಿಸಿಕೊಂಡಿದೆ.
ತಲಪ್ಪಾಡಿಯಿಂದ ಚೆಂಗಳ ತನಕದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕೆಲಸಕ್ಕೆ 2021 ನವಂಬರ್ 18ಕ್ಕೆ ಚಾಲನೆ ನೀಡಲಾ ಗಿತ್ತು. ಇದರಂತೆ ರಾಷ್ಟ್ರೀಯ ಹೆದ್ದಾರಿ ಯನ್ನು 45 ಮೀಟರ್ (ಷಟ್ಪಥ) ವಾಗಿ ಅಗಲಗೊಳಿಸಲಾಗುತ್ತಿದೆ. ಇದರ ಇಕ್ಕಡೆಗಳಲ್ಲಿ ತಲಾ 18 ಮೀಟರ್ ಅಗಲದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಈ ಸರ್ವೀಸ್ ರಸ್ತೆಗಳ ಅಗತ್ಯ ಕಡೆಗಳಲ್ಲಿ ಯೂಟಿಲಿಟಿ ಕಾರಿಡಾರ್ (ಬಸ್ ತಂಗುದಾಣ) ವನ್ನು ನಿರ್ಮಿಸಲಾಗುವುದು. ಇದರಂತೆ ತಲಪ್ಪಾಡಿಯಿಂದ ಆರಂಭಗೊಂಡು ಚೆಂಗಳ ತನಕ ಒಟ್ಟು 65 ತಂಗುದಾಣಗಳನ್ನು ನಿರ್ಮಿಸಲಾಗುವುದು. ಮಾತ್ರವಲ್ಲ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀ ಪಗಳನ್ನು ಅಳವಡಿಸಲಾಗುವುದು. ಇದೇ ವೇಳೆ ನಗರದ ಕರಂದಕ್ಕಾಡಿನಿಂದ ಆರಂಭಗೊಂಡು ಹೊಸ ಬಸ್ ನಿಲ್ದಾಣ ತನಕ ನಿರ್ಮಿ ಸಲಾಗುವ ಫ್ಲೈ ಓವರ್‌ನ ನಿರ್ಮಾ ಣ ಕೆಲಸ ಈತನಕ ಇನ್ನೂ ಪೂರ್ಣಗೊಂಡಿಲ್ಲ. ಇದರ ಸ್ಪಾನ್ (ಕಂಬ)ಗಳ ಪೈಕಿ ನಾಲ್ಕರಷ್ಟು ಸ್ಪಾನ್ ಗಳ ನಿರ್ಮಾಣ ಕೆಲಸ ಈಗಲಷ್ಟೇ ಆರಂಭಗೊಳಿಸಲಾಗಿದೆ. ದಶಂಬರ್‌ನೊಳಗಾಗಿ ಇದರ ನಿರ್ಮಾಣ ಕೆಲಸ ಪೂರ್ತೀಕರಿ ಸಲಾಗುವುದೆಂದು ಗುತ್ತಿಗೆ ಸಂಸ್ಥೆ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿರ್ಮಾಣ ಕೆಲಸ ಪೂರ್ತಿಗೊಂಡ ಬಳಿಕ ತಲಪ್ಪಾಡಿಯಿಂದ ಚೆಂಗಳ ತನಕ ಸಾರಿಗೆ ಸಂಚಾರ ಸುಗಮಗೊಳ್ಳಲಿದೆ.
ಎಂಟು ಸೇತುವೆ, ಎರಡು ಮೇಲ್ಸೇತುವೆ
ಕಾಸರಗೋಡು: ತಲಪ್ಪಾಡಿ ಯಿಂದ ಆರಂಭಗೊಂಡು ಚೆಂಗಳ ತನಕದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಒಟ್ಟು ಎಂಟು ಸೇತುವೆಗಳನ್ನು ನಿರ್ಮಿಸಲಾ ಗುತ್ತಿದೆ. ಇದರಲ್ಲಿ ನಾಲ್ಕುದೊಡ್ಡ ಹಾಗೂ ನಾಲ್ಕು ಕಿರು ಸೇತುವೆಗಳು ಒಳಗೊಂಡಿದೆ. ಇದರ ಹೊರತಾಗಿ ಕಾಸರ ಗೋಡು ನಗರದ ಕರಂದಕ್ಕಾಡಿನಿಂದ ಹೊಸಬಸ್ ನಿಲ್ದಾಣ ತನಕ ಹಾಗೂ 1130 ಮೀಟರ್ ಉದ್ದದಲ್ಲಿ 26 ಸ್ಪಾನ್‌ಗಳು ಒಳಗೊಂಡ ಮೇಲ್ಸೇತು ವೆಯನ್ನೂ ನಿರ್ಮಿಸಲಾಗುತ್ತಿದೆ. ಇದರ ಹೊರತಾಗಿ ಉಪ್ಪಳದಲ್ಲೂ 210 ಮೀಟರ್ ಉದ್ದದಲ್ಲಿ ಇನ್ನೊಂದು ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ.