ತರವಾಡು ಮನೆ, ಕ್ಷೇತ್ರದಿಂದ ಭಂಡಾರ, ಚಿನ್ನಾಭರಣ ಸಹಿತ ವಿವಿಧ ಸಾಮಗ್ರಿ ಕಳವು
ಕುಂಬಳೆ: ಕುಂಬಳೆಯಲ್ಲಿ ಮತ್ತೆ ಕಳವು ಪ್ರಕರಣ ನಡೆದಿದೆ. ಕುಂಬಳೆ ಪೇಟೆಯಲ್ಲಿರುವ ಶಬರ ಶಂಕರ ಸೇವಾ ಸಮಿತಿಯ ಕುನ್ನಿಲ್ಪಾರ ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯಿಂದ ಚಿನ್ನಾಭರಣ, ಭಂಡಾರ ಸಹಿತ ವಿವಿಧ ಸೊತ್ತುಗಳು ಕಳವಿಗೀಡಾಗಿದೆ.
ತರವಾಡು ಮನೆಯಿಂದ ಚಿನ್ನಾದಿಂದ ತಯಾರಿಸಲಾದ ಒಂದು ಹೂವು, ಹಾಗೂ ಕತ್ತಿ ಕಳವಿಗೀ ಡಾಗಿದೆ. ಸುಮಾರು ಒಂದೂವರೆ ಪವನ್ ಚಿನ್ನ ಬಳಸಿ ಇವುಗಳನ್ನು ತಯಾರಿಸಲಾಗಿತ್ತೆಂದು ತಿಳಿಸಲಾಗಿದೆ.
ತರವಾಡು ಕ್ಷೇತ್ರದಿಂದ ಶ್ರೀ ವಯನಾಟು ಕುಲವನ್ ದೈವದ ಬೆಳ್ಳಿಯಿಂದ ತಯಾರಿಸಲಾದ ಆಯುಧ, ವಿಷ್ಣುಮೂರ್ತಿ ದೈವದ ಎರಡು ಆಯುಧಗಳು, ತೊಂಡಚ್ಚಮ್ಮಾರ್ ದೈವದ ಆಯುಧ, ಹಿತ್ತಾಳೆಯ ಮೂರು ಪಾತ್ರೆಗಳು, 25 ಕಾಲುದೀಪಗಳು, ಚೆಂಬು, ಕಾಣಿಕೆ ಹುಂಡಿ, ವೆಂಕಟ್ರಮಣ ದೇವರ ಮುಡಿಪು ಕಳವಿಗೀಡಾಗಿದೆ. ಕಾಣಿಕೆ ಹುಂಡಿಯಲ್ಲಿ ಸುಮಾರು 1 ಸಾವಿರ ರೂಪಾಯಿ, ಮುಡಿಪಿನಲ್ಲಿ ಸುಮಾರು ೧೫ ಸಾವಿರ ರೂಪಾಯಿಗಳಿತ್ತೆಂದು ಸಂಬಂ ಧಪಟ್ಟವರು ತಿಳಿಸಿದ್ದಾರೆ. ನಿನ್ನೆ ಸಂಜೆ ಕ್ಷೇತ್ರದಲ್ಲಿ ದೀಪ ಹಚ್ಚಲು ತಲುಪಿದವರಿಗೆ ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯ ಬೀಗ ಮುರಿದಿರುವುದು ಕಂಡುಬಂದಿದೆ. ಅವರು ನೀಡಿದ ದೂರಿನಂತೆ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು ಕ್ಷೇತ್ರಕ್ಕೆ ತಲುಪಿ ಪರಿಶೀಲಿಸಿದಾಗ ವಿವಿಧ ಸೊತ್ತುಗಳು ಕಳವಿಗೀ ಡಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಸೇವಾ ಸಮಿತಿ ಕಾರ್ಯಕಾರಿ ಸದಸ್ಯ ಮನೋಹರ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.