ತರುಣಕಲಾವೃಂದದ ವಾರ್ಷಿಕೋತ್ಸವ ನಾಳೆ
ಉಪ್ಪಳ: ತರುಣ ಕಲಾವೃಂದ ಐಲ ಇದರ 56ನೇ ವಾರ್ಷಿಕೋತ್ಸವ ನಾಳೆ ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ವಿಷು ಜಾತ್ರೆ ಸಂದರ್ಭದಲ್ಲಿ ನಡೆಯಲಿದೆ. ರಾತ್ರಿ 7ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಆಡಳಿತ ಮೊಕ್ತೇಸರ ಎಚ್.ಕೆ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಟ ಸ್ವರಾಜ್ ಶೆಟ್ಟಿ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲತಾ.ಕೆ, ಕುಂಬಳೆ ಕಣಿಪುರ ಕ್ಷೇತ್ರ ಬ್ರಹ್ಮಕಲಶೋತ್ಸವ ಪ್ರಧಾನ ಕಾರ್ಯದರ್ಶಿ ಜಯ ಕುಮಾರ್.ಕೆ.ಎಂ ಮುಖ್ಯ ಅತಿಥಿಗಳಾಗಿರುವರು. ರಾತ್ರಿ 7.30ರಿಂದ ಕಲಾ ಸಂಗಮ ಮಂಗಳೂರು ಸಾದರಪಡಿಸುವ ‘ಮೈತಿದಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.