ತಾಯಿಯ ಕಣ್ಮುಂದೆ ಪುತ್ರಿಯ ಮಾನಭಂಗ  ತಲೆಮರೆಸಿಕೊಂಡಿದ್ದ ತಾಯಿ, ಪ್ರಿಯತಮ ಸೆರೆ

ಪತ್ತನಂತಿಟ್ಟ: ತಾಯಿಯ ಒಪ್ಪಿಗೆಯೊಂದಿಗೆ ಆಕೆಯ ಎದುರಲ್ಲೇ 14ರ ಹರೆಯದ ಪುತ್ರಿಯನ್ನು ಕೊಲೆಪ್ರಕಣದ ಆರೋಪಿ ಮಾನಭಂಗಪಡಿಸಿರುವುದಾಗಿ ಕೇಸು ದಾಖಲಿಸಲಾಗಿದೆ. ತಾಯಿಯ ಗೆಳೆಯ ಮಾನಭಂಗಪಡಿಸಿದ ವ್ಯಕ್ತಿಯಾಗಿದ್ದಾನೆ.  ಆ ಬಳಿಕ ನಾಪತ್ತೆಯಾಗಿದ್ದ ತಾಯಿ ಹಾಗೂ ಗೆಳೆಯನನ್ನು ಪತ್ತನಂತಿಟ್ಟ ಪೊಲೀಸರು ಬಂಧಿಸಿದರು.

ರಾಣಿ ಅಙಾಡಿಕ್ಕಲ್ ಪುಣಕ್ಕಾವ್‌ಪಳ್ಳಿನಡಯಿಲ್ ಜೈಮೋನ್(42), ತಿರುವನಂತಪುರ ನಿವಾಸಿಯಾದ 44ರ ಹರೆಯದ ಮಹಿಳೆ ಸೆರೆಯಾದವರು. ಜೈಮೋನ್ ಮಲಪ್ಪುರ ಕಳಿಕ್ಕಾವ್ ಪೊಲೀಸ್ ಠಾಣೆಯಲ್ಲಿ ನೋಂದಾಯಿತಗೊಂಡ ಕೊಲೆ ಪ್ರಕರಣದ ಆರೋಪಿಯಾಗಿ ದ್ದಾನೆ. ಇತರ 11 ಕ್ರಿಮಿನಲ್ ಪ್ರಕರಣಗಳು ಈತನ ಹೆಸರಲ್ಲಿದೆ. ಇದರಲ್ಲಿ ಮೂರು ಮಾನಭಂಗ ಪ್ರಕರಣಗಳು ಹಾಗೂ 1 ಕಳವು, ಇನ್ನೊಂದು ಫೋಕ್ಸೋ ಪ್ರಕರಣ ಸೇರಿದೆ. ಮಾನಭಂಗ ಕೇಸೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯಾಗಿದ್ದಾನೆ. ಬಾಲಕಿಯ ತಾಯಿ  ಮೊದಲ ಪತಿಯನ್ನು ಉಪೇಕ್ಷಿಸಿ ಈತನ ಜೊತೆ ಸೇರಿಕೊಂಡಿದ್ದಾಳೆ. ಸೆಪ್ಟಂಬರ್ 15ರಂದು ಮುಂಜಾನೆ ಪತ್ತನಂತಿಟ್ಟದ ವಸತಿಗೃಹವೊಂದರ ಕೊಠಡಿಯಲ್ಲಿ ಬಾಲಕಿಗೆ ಕ್ರೂರ ದೌರ್ಜನ್ಯಗೈಯ್ಯಲಾಗಿದೆ. ತಾಯಿ  ಬಾಲಕಿಯನ್ನು  ಕರೆದುಕೊಂಡು ಜೈಮೋನ್‌ನ ಜೊತೆ ವಸತಿಗೃಹದಲ್ಲಿ ಕೊಠಡಿ ತೆಗೆದಿದ್ದಳು. ನಿದ್ರಿಸಿದ್ದ ಬಾಲಕಿಯನ್ನು ಎಬ್ಬಿಸಿ ಈತ ತಾಯಿಯ ಕಣ್ಮುಂದೆಯೇ ದೌರ್ಜನ್ಯಗೈದಿದ್ದಾರೆ. ಇದಕ್ಕೆಲ್ಲಾ ತಾಯಿ ಒತ್ತಾಸೆ ನೀಡಿದ್ದಾಳೆ. ಚೈಲ್ಡ್ ವೆಲ್ಫೇರ್ ಸಮಿತಿ ಮೂಲಕ ಘಟನೆ ಬೆಳಕಿಗೆ ಬಂದಿದೆ. ಕೇಸು ದಾಖಲಿಸುವುದರೊಂದಿಗೆ ಬಾಲಕಿಯ ತಾಯಿ ಹಾಗೂ ಜೈಮೋನ್ ಅಲ್ಲಿಂದ ಪರಾರಿಯಾಗಿ ಕರ್ನಾಟಕದಲ್ಲಿದ್ದರು. ಮೊಬೈಲ್ ಫೋನ್ ಲೊಕೇಶನ್ ಆಧಾರದಲ್ಲಿ ತನಿಖೆ ನಡೆಸಿದಾಗ ಮುಲ್ಕಿ ಯಲ್ಲಿರುವುದಾಗಿ ಪತ್ತೆಹಚ್ಚಲಾಗಿದ್ದು, ಅಲ್ಲಿಂದ ಇಬ್ಬರನ್ನು  ಕಸ್ಟಡಿಗೆ ತೆಗೆಯಲಾಗಿದೆ

Leave a Reply

Your email address will not be published. Required fields are marked *

You cannot copy content of this page