ತೀಯಾ ಮಹಾಸಭಾ ಪೈವಳಿಕೆ ಪಂಚಾಯತ್ ಸಮಿತಿಯ ಕಾರ್ಯಾಲಯ ಉದ್ಘಾಟನೆ
ಉಪ್ಪಳ: ತೀಯ ಮಹಾಸಭಾ ಪೈವಳಿಕೆ ಪಂಚಾಯತ್ ಸಮಿತಿಯ ನೂತನ ಕಾರ್ಯಾಲಯ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಮೀಪ ಕಾರ್ಯಾರಂಭಗೊAಡಿತು. ಉಪ್ಪಳ ಐವರ್ ಭಗವತಿ ಕ್ಷೇತ್ರದ ಸ್ಥಾನಿಕ ರಾಧಾಕೃಷ್ಣ ಬೆಳ್ಚಪ್ಪಾಡ ದೀಪ ಪ್ರಜ್ವಲನೆ ಗೈದರು. ತೀಯ ಮಹಾಸಭಾ ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನಮ್ ಉದ್ಘಾಟಿಸಿ ಮಾತನಾಡಿದರು. ತೀಯ ಮಹಾಸಭಾ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷ ಶೇಖರ ಬೆದ್ರಾಡಿ ಅಧ್ಯಕ್ಷತೆ ವಹಿಸಿದರು. ಮಾಧವ ಗುರಿಕ್ಕಾರ್ ಕಡೆಂಕೊಡಿ, ನಾರಾಯಣ ಗುರಿಕ್ಕಾರ್ ಮೀಂಜ, ರಾಘವ ಪೈವಳಿಕೆ, ಪಧ್ಮನಾಭ ಬಾಯಿಕಟ್ಟೆ , ಕೃಷ್ಣ ಕಯ್ಯಾರು, ಪುಷ್ಪ ಕಮಲಾಕ್ಷ ಮಾತನಾಡಿದರು. ಪ್ರಶಾಂತ್ ಪಾಂಡ್ಯಡ್ಕ, ಮಂಜುನಾಥ. ಎಸ್ ಬಾಯಿಕಟ್ಟೆ, ಪ್ರಶಾಂತ್ ಪೆರೋಡಿ, ಸುನಿಲ್ ಬಾಯಿಕಟ್ಟೆ, ಪುಷ್ಪ ಜಯ ರಾಮ್, ನವೀನ್ ಖಂಡಿಗೆÀ, ಕುಮಾರ ಬಾಯಿಕಟ್ಟೆ, ಲೀಲಾವತಿ ಬೋಳಂಗಳ, ಸರಿತಾ ಕೃಷ್ಣ, ಹಾಗೂ ತೀಯ ಮಹಾ ಸಭಾದ ಪದಾಧಿಕಾರಿಗಳು ಉಪಸ್ಥಿತ ರಿದ್ದರು. ಸಂತೋಷ್ ಬಾಯಾರ್ ಸ್ವಾಗತಿಸಿ, ಅಜಿತ ಬಾಯಿಕಟ್ಟೆ ವಂದಿಸಿದರು.