ತೀಯ ಮಹಾಸಭಾದ ಉಚಿತ ಹೃದಯ ತಪಾಸಣಾ ಶಿಬಿರ 19ರಂದು
ಉಪ್ಪಳ: ತೀಯ ಮಹಾಸಭಾ ಪೈವಳಿಕೆ ಪಂಚಾಯತ್ ಸಮಿತಿ ವತಿಯಿಂದ ಮಂಗಳೂರು ಹಾರ್ಟ್ ಸ್ಕಾ÷್ಯನ್ ಫೌಂಡೇಶನ್ ಹಾಗೂ ಒಮೇಗಾ ಆಸ್ಪತ್ರೆ ಇದರ ಆಶ್ರಯದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಜ. 19ರಂದು ಬೆಳಿಗ್ಗೆ 10ರಿಂದ ಜಿ.ಎಚ್. ಎಸ್.ಎಸ್ ಪೈವಳಿಕೆ ನಗರ ಶಾಲೆಯಲ್ಲಿ ನಡೆಯಲಿದೆ. ತೀಯ ಮಹಾಸಭಾ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷ ಶೇಖರ ಬೆದ್ರಾಡಿ ಅಧ್ಯಕ್ಷತೆ ವಹಿಸುವರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ ಉದ್ಘಾಟಿಸುವರು. ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಆಚಾರ ಸ್ಥಾನಿಕರಾದ ರಾಧಾಕೃಷ್ಣ ಬೆಳ್ಚಾಡ, ಡಾ.ಕೆ ಮುಕುಂದ್, ಪಂ. ಉಪಾಧ್ಯಾಕ್ಷೆ ಪುಷ್ಪಲಕ್ಷಿ÷್ಮÃ, ಡಾ.ಮುರಳೀಧರ ಶೆಟ್ಟಿ ಬಾಯಾರು, ಡಾ. ರಾಜರಾಮ್ ಭಟ್, ಪ್ರಾಂಶುಪಾ¯ ರಘುರಾಮ ಆಳ್ವ, ಮಹಾಸಭಾದ ಗೌರ ವಾಧ್ಯಕ್ಷ ರಾಘವ ಪೈವಳಿಕೆ, ಪಂಚಾಯತ್ ಸದಸ್ಯರಾದ ಝಡ್.ಎ ಕಯ್ಯಾರ್, ಅಬ್ದುಲ್ಲ.ಕೆ, ಸುನಿತಾ ವಲ್ಟಿ, ಪಿ.ಟಿ.ಎ ಅಧ್ಯಕ್ಷ ರಜಾಕ್ ಚಿಪ್ಪಾರ್, ನಿವೃತ್ತ ಅಧ್ಯಾಪಕ ಗೋಪಾಲ ಉಪಸ್ಥಿತರಿರುವರು.