ತೂಮಿನಾಡು ಮಹಾಕಾಳಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಂಜೇಶ್ವರ: ಕಳೆದ 10 ವರ್ಷಗಳಿಂದ ದುರಸ್ತಿ ಕಾಣದ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಲಾದ ತೂಮಿನಾಡು ಮಹಾಕಾಳಿ ರಸ್ತೆಗೆ ಮೋಕ್ಷ ಲಭಿಸಿದೆ. ಪಂಚಾಯತ್ ನಿಧಿಯಿಂದ ಮಂಜೂರಾದ 7 ಲಕ್ಷ ರೂ. ಫಂಡ್‌ನಲ್ಲಿ ನಿರ್ಮಿಸಲಾದ 142 ಮೀಟರ್ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ ಗೊಂಡಿತು. ಸಮಾಜ ಸೇವಕ ಇಲ್ಯಾಸ್ ತೂಮಿನಾಡು ರಸ್ತೆ ಲೋಕಾರ್ಪ ಣೆಗೊಳಿಸಿದರು. ಕಳೆದ 10 ವರ್ಷ ದುರಸ್ತಿ ಕಾಣದ ರಸ್ತೆ ಬಗ್ಗೆ ಇಲ್ಯಾಸ್ ತೂಮಿನಾಡು ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಂದಲೇ ರಸ್ತೆ ಲೋಕಾರ್ಪಣೆ ಗೊಳಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page