ತೆಂಗಿನ ಮರವೇರುವ ಕಾರ್ಮಿಕ ನೇಣುಬಿಗಿದು ಸಾವು
ಕುಂಬಳೆ: ತೆಂಗಿನ ಮರ ಹತ್ತುವ ಕಾರ್ಮಿಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬಂಬ್ರಾಣ ಅಂಡಿತ್ತಡ್ಕ ನಿವಾಸಿ ರಮೇಶ್ (45) ಮೃತವ್ಯಕ್ತಿ. ಇವರ ಪತ್ನಿ ನಿನ್ನೆ ವಯನಾಡಿಗೆ ತೆರಳಿ ದ್ದರು. ಇದರಿಂದ ರಮೇಶ್ ಹಾಗೂ ಮಕ್ಕಳು ಮನೆಯಲ್ಲಿದ್ದರು. ಇಂದು ಬೆಳಿಗ್ಗೆ ಮಕ್ಕಳು ಎದ್ದು ನೋಡಿದಾಗ ರಮೇಶ್ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ತಿಳಿಸಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಬಾಬು-ದೇವಕಿ ದಂಪತಿಯ ಪುತ್ರನಾದ ಮೃತರು ಪತ್ನಿ ಕವಿತ, ಮಕ್ಕಳಾದ ರಾಜೇಶ್, ರವಿಣ, ರಜಿತ್, ಸಹೋದರರಾದ ರಾಧಾಕೃಷ್ಣ, ರತ್ನಾಕರ, ಸಹೋದರಿ ಸುಮಿತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.