ತೆಂಗಿನ ಮರ ಮಗುಚಿ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ

ಕುಂಬಳೆ: ನಿನ್ನೆ ಸಂಜೆ ಬೀಸಿದ ಗಾಳಿಗೆ ತೆಂಗಿನಮರವೊಂದು ಮಗುಚಿ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಕುಂಬಳೆ ಸಿಎಚ್‌ಸಿ ಮಾಟೆಂಗುಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮರ ಬಿದ್ದುದರಿಂದ ವಿದ್ಯುತ್ ಕಂಬ ವಾಲಿ ನಿಂತಿದ್ದು ತಂತಿಗಳು ತುಂಡಾಗಿ ನೇತಾಡುತ್ತಿದ್ದವು. ಮಾಟೆಂಗುಳಿ ಭಾಗಕ್ಕಿರುವ ವಿದ್ಯುತ್ ಪೂರ್ಣವಾಗಿ  ಮೊಟಕುಗೊಂಡಿದೆ. ಬೇರೆ ಕಂಬ ಸ್ಥಾಪಿಸಿದ ಬಳಿಕವಷ್ಟೇ ವಿದ್ಯುತ್ ಸರಬರಾಜು ಸಾಧ್ಯವೆಂದು ತಿಳಿದು ಬಂದಿದೆ. ತೆಂಗಿನಮರ ಮಗುಚಿ ಬೀಳುವ ವೇಳೆ ಆ ಪರಿಸರದಲ್ಲಿ ಯಾರೂ ಇಲ್ಲದುದರಿಂದ ಭಾರೀ ಅಪಾಯ ತಪ್ಪಿದೆ.

Leave a Reply

Your email address will not be published. Required fields are marked *

You cannot copy content of this page