ತೆಮರ್ ಮೈದಾನವನ್ನು ಪುತ್ತಿಗೆ ಪಂಚಾಯತ್ ಮೈದಾನವಾಗಿ ಘೋಷಣೆ
ಪುತ್ತಿಗೆ: ಪುತ್ತಿಗೆ, ಬದಿಯಡ್ಕ, ಎಣ್ಮಕಜೆ ಪಂಚಾಯತ್‌ಗಳ ಸಂಗಮ ಸ್ಥಳ ಹಾಗೂ ಪುತ್ತಿಗೆ ಪಂಚಾಯತ್‌ನ ೫ನೇ ವಾರ್ಡ್ ಗೊಳಪಟ್ಟ ಅರಿಯ ಪ್ಪಾಡಿ ತೆಮರ್ ಮೈದಾನವನ್ನು ಪುತ್ತಿಗೆ ಪಂಚಾಯತ್ ಮೈದಾನ ವಾಗಿ ಘೋ ಷಿಸಲಾಯಿತು. ಖಾಸಗಿ ವ್ಯಕ್ತಿ ಈ ಸ್ಥಳವನ್ನು ಸ್ವಂತ ಸ್ಥಳವೆಂದು ಹಕ್ಕು ಮಂಡಿಸಿದರೂ 1998ರಲ್ಲಿ ಹೈಕೋ ರ್ಟ್ ಇದನ್ನು ಸರಕಾರಿ ಸ್ಥಳವೆಂದು ಘೋಷಿಸಿತ್ತು. 9 ವರ್ಷಗ ಳಿಂದ ಸಾಮಾಜಿಕ ಕಾರ್ಯಕರ್ತ ನಾದ ಸಂತೋಷ್ ಕುಮಾರ್, ವಾರ್ಡ್ ಸದಸ್ಯ ಅಬ್ದುಲ್ ಮಜೀದ್ ಹಾಗೂ ಪಂಚಾಯತ್ ಆಡಳಿತ ಸಮಿತಿ ನಡೆಸಿದ ಕಾನೂನು ಹೋರಾ ಟದ ಭಾಗವಾಗಿ ಇತ್ತೀಚೆಗೆ ಉಪ್ಪಳದಲ್ಲಿ ನಡೆದ ತಾಲೂಕು ಮಟ್ಟದ ಅದಾಲ ತ್‌ನಲ್ಲಿ ನೀಡಿದ ದೂರು ಹಾಗೂ ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ ಸಚಿವ ವಿ. ಅಬ್ದುಲ್ ರಹಿಮಾನ್ ಸ್ಥಳವನ್ನು ವಶಪಡಿಸಿ ಕೊಳ್ಳುವಂತೆ ಪಂಚಾಯತ್‌ಗೆ ನಿರ್ದೇಶಿಸಿದ್ದಾರೆ. ಇದರ ಆಧಾರ ದಲ್ಲಿ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಈ ಸ್ಥಳದಲ್ಲಿ ಪಂಚಾಯತ್ ಮೈದಾನ ಎಂಬ ನಾಮಫಲಕ ಸ್ಥಾಪಿಸಿದ್ದು, ಬಳಿಕ ಮೈದಾನದ ಉದ್ಘಾಟನೆ ನಿರ್ವಹಿಸಿ ದರು. ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ, ಪಂಚಾಯತ್ ಸದಸ್ಯೆ ಪ್ರೇಮಾ ಎಸ್ ರೈ, ಸಾಮಾಜಿಕ ಕಾರ್ಯಕರ್ತರಾದ ಖಮರುದ್ದೀನ್, ಡಿ.ಎನ್. ರಾಧಾಕೃಷ್ಣನ್, ಶಿವಪ್ಪ ರೈ, ಪ್ರದೀಪ್ ಕುಮಾರ್, ನಿಯಾಸ್ ಮಲಬಾರಿ, ಲತೀಫ್ ಕುಡ್ಪಂಗುಳಿ, ಮಜೀದ್ ಕಲ್ಕತ್ತ, ಇಬ್ರಾಹಿಂ ಮಾಸ್ತರ್, ಅಸೀಸ್ ಮಾಸ್ತರ್, ಉದಯ ಕುಮಾರ್, ಮಸ್ತೂಕ್, ರಾಮಣ್ಣ ಜಾಲು, ಸಂತೋಷ್ ಕುಮಾರ್ ಮಾತನಾಡಿದರು.