ತೋಟಕ್ಕೆ ನುಗ್ಗಿದ ಹಂದಿಗಳ ಹಿಂಡು: 20 ಕಂಗಿನ ಗಿಡ ನಾಶ
ದೇಲಂಪಾಡಿ: ಪಂಚಾಯತ್‌ನ 12ನೇ ವಾರ್ಡ್ ವ್ಯಾಪ್ತಿಯ ಪುದಿಯಕಂಡಂ ಎಂಬಲ್ಲಿ ಕೃಷಿಕರ ತೋಟಕ್ಕೆ ಹಂದಿಗಳ ಹಿಂಡು ನುಗ್ಗಿ ಕೃಷಿ ನಾಶಪಡಿಸಿವೆ. ಇಲ್ಲಿನ ರವೀಂದ್ರ ಮಣಿಯಾಣಿ ಎಂಬವರ ತೋಟದಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ಅಡಕೆ ಗಿಡವನ್ನು ಹಂದಿಗಳು ನಾಶಪಡಿಸಿವೆ. ನೆಟ್ಟು ಮೂರು ವರ್ಷ ಕಳೆದ ಕಂಗಿನ ಗಿಡಗಳ ನಾಶದಿಂದ ರವೀಂದ್ರ ಮಣಿಯಾಣಿ ಕಂಗಾಲಾಗಿದ್ದಾರೆ. ಇದೇ ಪರಿಸರದಲ್ಲಿ ವಿವಿಧ ಕಾಡುಪ್ರಾಣಿಗಳ ಉಪಟಳ ತೀವ್ರಗೊಂಡಿದ್ದು, ಕೃಷಿಕರು ಸಂಕಷ್ಟದಲ್ಲಿದ್ದಾರೆ.