ತ್ಯಾಜ್ಯ ಉಪೇಕ್ಷೆ: ಎನ್ಫೋರ್ಸ್ಮೆಂಟ್ ತಂಡದಿಂದ ದಂಡ
ಕಾಸರಗೋಡು: ಸ್ಥಳೀಯಾಡಳಿತ ಇಲಾಖೆಯ ಸ್ಪೆಷಲ್ ಎನ್ಪೋರ್ಸ್ಮೆಂಟ್ ಸ್ಕ್ವಾಡ್ನ ತ್ಯಾಜ್ಯ ಸಂಸ್ಕರಣೆ ಉಲ್ಲಂಘನೆಗಳ ಪರಿಶೀಲನೆ ಕಾಸರಗೋಡು, ನೀಲೇಶ್ವರ ನಗರಸಭೆಗಳಲ್ಲಿ ಹಾಗೂ ಮಧೂರು ಪಂಚಾಯತ್ನ ವಿವಿಧ ಕಡೆಗಳಲ್ಲಿ ನಡೆಸಲಾಯಿತು. ಮಧೂರು ಕೋಟೆಕಣಿಯ ಅಪಾರ್ಟ್ಮೆಂಟ್ ಗಳು, ಕ್ವಾರ್ಟರ್ಸ್, ಮಧೂರಿನ ರೆಸಿಡೆನ್ಸಿ ಎಂಬ ಸಂಸ್ಥೆಯ ಮಾಲಕರಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉಪೇಕ್ಷಿಸಿದ ಹಾಗೂ ಕಿಚ್ಚಿರಿಸಿದ ವಿವಿಧ ಕಾಯ್ದೆಗಳ ಪ್ರಕಾರ 5000 ರೂ.ನಂತೆ ದಂಡ ವಿಧಿಸಲಾಗಿದೆ.
ನೀಲೇಶ್ವರ ನಗರಸಭೆಯ ಕ್ವಾರ್ಟರ್ಸ್ ಹಾಗೂ ಆನೆಚ್ಚಾಲ್ನ ಕ್ವಾರ್ಟರ್ಸ್ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಿಚ್ಚಿರಿಸಿರುವುದಕ್ಕೆ 5000 ರೂ.ನಂತೆ ದಂಡ ವಿಧಿಸಲಾಗಿದೆ. ಉಪಯೋಗಿಸುವಂತಹ ನೀರನ್ನು ಚರಂಡಿಗೆ ಹರಿಯಬಿಟ್ಟ ಹಿನ್ನೆಲೆಯಲ್ಲಿ ಕಾಸರಗೋಡು ಇಜ್ಜತ್ನಗರದ ಕ್ವಾರ್ಟರ್ಸ್ ಮಾಲಕನಿಗೆ 10,000 ರೂ, ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಉಪೇಕ್ಷಿಸಿರುವುದಕ್ಕೆ 1000 ರೂ. ದಂಡ ಹೇರಲಾಗಿದೆ. ಜಿಲ್ಲೆಯ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ತಪಾಸಣೆಗಳನ್ನು ನಡೆಸಲಾಗುತ್ತಿದೆ. ತಂಡದ ಲೀಡರ್ ಕೆ.ವಿ. ಮೊಹಮ್ಮದ್ ಮದನಿ, ಹೆಲ್ತ್ ಇನ್ಸ್ಪೆಕ್ಟರ್ ನಾರಾಯಣಿ, ರಜನ, ಫಾಸಿಲ್, ಕೆ. ಅಶೋಕ್ ಕುಮಾರ್, ಕೆ. ಶಿಜು ಭಾಗವಹಿಸಿದರು.