ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಮಾರ್ಪಾಡುಗೊಂಡ ಉಪ್ಪಳ ಬಸ್ ನಿಲ್ದಾಣ ಕಟ್ಟಡ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಶುಚೀಕರಣಕ್ಕೆ ವ್ಯವಸ್ಥಿತ ಕ್ರಮವಿಲ್ಲ. ಪೇಟೆ ಸಹಿತ ಒಳರಸ್ತೆಗಳಲ್ಲಿ ತ್ಯಾಜ್ಯ ರಾಶಿಯಿಂದ ದುರ್ವಾಸನೆ ಉಂಟಾಗುತ್ತಿದ್ದು, ಮಳೆ ಗಾಲದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಉಪ್ಪಳ ಬಸ್ ನಿಲ್ದಾಣದ ಕಟ್ಟಡ ಕೂಡಾ ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಮಾರ್ಪಾಡುಗೊಂಡಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಬಸ್‌ನಿಲ್ದಾಣದ ಕಟ್ಟಡದ ಮೇಲ್ಭಾಗದಲ್ಲಿ ವರ್ಷಗಳ ಹಿಂದೆ ಪರಿಸರದಿಂದ ಸಂಗ್ರಹಿಸಿದ ಭಾರೀ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಗೋಣಿ ಚೀಲದಲ್ಲಿ ತುಂಬಿಸಿ ಇರಿಸಲಾಗಿತ್ತು. ಆದರೆ ಇದೀಗ ಎರಡು ವರ್ಷ ಕಳೆದರೂ ಅದನ್ನು ತೆರವುಗೊಳಿಸಿಲ್ಲ. ಇದರಿಂದಾಗಿ ಗಾಳಿಗೆ ತ್ಯಾಜ್ಯದ ಚೂರುಗಳು ನಿಲ್ದಾಣ ಪೂರ್ತಿ ಹರಡುತ್ತಿದೆ. ಈ ಕಟ್ಟಡದಲ್ಲಿ ಹೋಟೆಲ್ ಸಹಿತ ಹಲವಾರು ವ್ಯಾಪಾರ ಸಂಸ್ಥೆಗಳು ಕಾಯÁðಚರಿಸುತ್ತಿದ್ದು, ದಿನನಿತ್ಯ ಶಾಲಾ ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿ ನಿಲ್ದಾಣ ತಲುಪುತ್ತಿದ್ದಾರೆ. ಇಲ್ಲಿನ ಶೌಚಾಲಯದಲ್ಲಿ ಬೆಳಕು, ನೀರಿನ ಸಮಸ್ಯೆ ಕೂಡಾ ಕಾಡುತ್ತಿದೆ. ಪಂಚಾಯತ್ ಅಧಿಕಾರಿಗಳು, ಆರೋಗ್ಯ ಇಲಾಖೆ ಕೂಡಲೇ ಕಟ್ಟಡ ಸಹಿತ ಪರಿಸರದಲ್ಲಿ ತುಂಬಿಕೊAಡಿರುವ ತ್ಯಾಜ್ಯವನ್ನು ತೆರವುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.