ತ್ಯಾಜ್ಯ ಸಂಸ್ಕರಣೆಯ ಲೋಪ : ದಂಡ


ಕಾಸರಗೋಡು: ತ್ಯಾಜ್ಯ ಸಂಸ್ಕರಣೆಗಳಲ್ಲಿನ ಲೋಪದೋಷಗಳನ್ನು ಪರಿಶೀಲಿಸುವುದಕ್ಕಾಗಿ ಕಾಸರಗೋಡು ನಗರಸಭೆ, ಅಜಾನೂರು ಪಂಚಾಯತ್ ವ್ಯಾಪ್ತಿಯಲ್ಲಿ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ತಲುಪಿದೆ. ದ್ರಾವಕ ತ್ಯಾಜ್ಯ ಸಂಸ್ಕರಣೆಯ ಲೋಪಕ್ಕಾಗಿ ಮಾವುಂಗಲ್ ಖಾಸಗಿ ಆಸ್ಪತ್ರೆಗೂ ಘನ ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಎಸೆದಿರುವುದಕ್ಕೆ ಹಾಡ್ವೇðರ್ಸ್ಗೆ 10,000 ರೂ.ನಂತೆ ದಂಡ ವಿಧಿಸಲಾಯಿತು. ಘನ ತ್ಯಾಜ್ಯ ಸಂಸ್ಕರಣೆಯಲ್ಲಿನ ಲೋಪಕ್ಕಾಗಿ ತಳಂಗರೆ, ತೆರುವತ್ತ್ ಎಂಬೆಡೆಗಳ ಕ್ವಾರ್ಟರ್ಸ್ಗಳಿಗೆ 5000 ರೂ.ನಂತೆ ವಿವಿಧ ಕಾಯ್ದೆಗಳ ಪ್ರಕಾರ ದಂಡ ವಿಧಿಸಲಾಗಿದೆ. ತಂಡದಲ್ಲಿ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ಲೀಡರ್ ಮುಹಮ್ಮದ್ ಮದನಿ, ಹೆಲ್ತ್ ಇನ್ಸ್ಪೆಕ್ಟರ್ಗಳಾದ ಆಶಾಮೇರಿ, ಅಮಿಶಾ, ಫಾಸಿಲ್ ಇ.ಕೆ., ಸನಲ್ ಎಂ. ಭಾಗವಹಿಸಿದರು.

You cannot copy contents of this page