ದಂಪತಿಯ ಚಿನ್ನಾಭರಣ ದರೋಡೆ ಪ್ರಕರಣ : ಹಲವರನ್ನು ತನಿಖಗೊಳಪಡಿಸಿದ ಪೊಲೀಸ್
ಕಾಸರಗೋಡು: ಚೆಮ್ನಾಡ್ ಕೈಂದಾರ್‌ನಲ್ಲಿ ವೃದ್ಧ ದಂಪತಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಎಂಟು ಪವನ್ ಚಿನ್ನಾಭರಣ ದರೋಡೆಗೈದ ಪ್ರಕರಣದಲ್ಲಿ ಪೊಲೀಸರು ಹಲವರನ್ನು ತನಿಖೆಗೊಳಪಡಿಸಿದ್ದಾರೆ.
ದರೋಡೆಗೈಯ್ಯಲ್ಪಟ್ಟ ಕೈಂದಾರ್ ನ ಕೋಡೋತ್ ಕುಂಞಿಕಣ್ಣನ್ ನಂಬ್ಯಾರ್, ಪತ್ನಿ ತಂಗಮಣಿ ಅಮ್ಮ ಅವರಿಂದ ಲಭಿಸಿದ ಹೇಳಿಕೆಯ ಆಧಾರದಲ್ಲಿ ಹಲವರನ್ನು ತನಿಖೆಗೊಳಪಡಿಸಲಾಗಿದೆ. ಚಾಕು ತೋರಿಸಿ ಬೆದರಿಕೆಯೊಡ್ಡಿ ತಂಗಮಣಿ ಅಮ್ಮರ ಕುತ್ತಿಗೆಯಿಂದ ತಾಳಿಮಾಲೆ ಕಸಿದುಕೊಂಡಾಗ ‘ತನ್ನ ತಾಳಿ ಮಾಲೆ ಎಂದು ತಿಳಿಸಿ ಅತ್ತಾಗ’ ಅದನ್ನು ಮರಳಿ ನೀಡಿರುವುದೇ ಇಂತಹ ಸಂಶಯಕ್ಕೆ ಎಡೆಯಾಗಿದೆ. ತಂಡದ ಓರ್ವ ತಾಳಿಮಾಲೆಯನ್ನು ಮರಳಿ ನೀಡಿದಾಗ ಮತ್ತೊಬ್ಬ ಅದನ್ನು ಕಸಿದುಕೊಂಡಿದ್ದನು. ದರೋಡೆ ನಡೆಸಿದ ಮನೆಯ ಬಗ್ಗೆ ಮಾಹಿತಿಯುಳ್ಳವರಿಂದ ಮುಂದಿನ ದಿನಗಳಲ್ಲಿ ಪೊಲೀಸರು ಹೇಳಿಕೆ ದಾಖಲಿಸಲಿದ್ದಾರೆಂದು ತಿಳಿದುಬಂದಿದೆ.
ಮನೆ ಹಾಗೂ ಪರಿಸರ ಪ್ರದೇಶದ ಕುರಿತು ತಿಳಿದಿರುವ ಓರ್ವ ಮುಖ ವಾಡಧಾರಿ ತಂಡದೊಂದಿಗಿದ್ದಾನೆಂದು ತನಿಖಾ ತಂಡ ಖಚಿತಪಡಿಸಿದೆ. ಕಳೆದ ಶನಿವಾರ ಮುಂಜಾನೆ ಕೈಂದಾರ್‌ನ ಮನೆಯಲ್ಲಿ ದರೋಡೆ ನಡೆದಿತ್ತು.