ದಾರಿಮಧ್ಯೆ ಅಸ್ವಸ್ಥಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನ
ಉಪ್ಪಳ: ನಡೆದು ಹೋಗುತ್ತಿದ್ದಾಗ ದಾರಿ ಮಧ್ಯೆ ಅಸ್ವÀಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾದ ವ್ಯಕ್ತಿ ಮೃತಪಟ್ಟಿದ್ದಾರೆ. ತಲಪಾಡಿ ನಾರ್ಲಪಡೀಲ್ ನಿವಾಸಿ ಸಿಪಿಎಂ ಕಾರ್ಯಕರ್ತ ನಾರಾಯಣ [65] ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ ಸುಮಾರು 9ಗಂಟೆ ವೇಳೆ ಐಲ ಮೈದಾನ ಬಳಿಯ ಸ್ನೇಹಿತರಾದ ವ್ಯಕ್ತಿಯೋರ್ವರ ಮನೆಗೆ ತೆರಳಿದ್ದರು. ಅಲ್ಲಿಂದ ಮನೆ ಕಡೆ ಬಸ್‌ಗೆ ತೆರಳಲು ಐಲ ಮೈದಾನ ದಾರಿಯಾಗಿ ನಯಬಜಾರ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಅಸ್ವಸ್ಥಗೆÆಂಡಿದ್ದಾರೆ. ಕೂಡಲೇ ಯುವಕನೋರ್ವ ಇವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡುತ್ತಿದ್ದ ಮಧ್ಯೆ ಮೃತಪಟ್ಟಿದ್ದಾರೆ. ಕೊರಗಜ್ಜ ದೈವದ ಪಾತ್ರಿಯಾಗಿದ್ದಾರೆ. ಮೃತರು ಪತ್ನಿ ಲೀಲಾ, ಮಕ್ಕಳಾದ ಹರಿಣಾಕ್ಷಿ, ಉಷಾ, ಸೊಸೆ ಶಶಿಕಲ, ಅಳಿಯಂದಿರು ಹಾಗೂ ಅಪಾರ ಬಂಧುಗಳು, ಹಿತೈಷಿಗಳನ್ನು ಅಗಲಿದ್ದಾರೆ. ಇವರ ಪುತ್ರ ಸುರೇಂದ್ರ ಈ ಹಿಂದೆ ನಿಧನರಾಗಿದ್ದಾರೆ.