ದಿಢೀರ್ ಆಗಿ ಸಂಭವಿಸುತ್ತಿರುವ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ
ಕಾಸರಗೋಡು: ದಿಢೀರ್ ಆಗಿ ಸಂಭವಿಸುವ ಸಾವು ಪ್ರಕರಣಗಳು ದೇಶದಲ್ಲಿ ಇತ್ತೀಚೆಗಿನಿಂದ ಹೆಚ್ಚಾಗುತ್ತಿದೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ದ ವರದಿಯಲ್ಲಿ ಸೂಚಿಸಲಾಗಿದೆ.
ಹಿಂದಿನ ವರ್ಷಗಳೊಂದಿಗೆ ಹೋಲಿಸಿದಲ್ಲಿ, ೨೦೨೨ರಲ್ಲಿ ದಿಢೀರ್ ಆಗಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಶೇ. ೧೨ರಷ್ಟು ಏರಿಕೆ ಉಂಟಾಗಿದೆ. ಇದರಲ್ಲಿ ಶೇ. ೫೭ರಷ್ಟು ಸಾವು ಹೃದಯಾ ಘಾತದಿಂದಲೇ ಉಂಟಾಗಿದೆ.
ಕೋವಿಡ್ ಮಾನವ ದೇಹದಲ್ಲಿ ಉಂಟುಮಾಡಿರುವ ಬದಲಾವಣೆಗಳು, ಅನುವಂಶಿಕ ಕಾಯಿಲೆ, ಜೀವನ ಶೈಲಿ ಇತ್ಯಾದಿಗಳೇ ದಿಢೀರ್ ಆಗಿ ಸಾವು ಉಂಟಾಗಲಿರುವ ಪ್ರಧಾನ ಕಾರಣಗಳಾ ಗಿವೆ ಎಂದು ಹೇಳಲಾಗುತ್ತಿದೆ. ಹೀಗೆ ದಿಢೀರ್ ಆಗಿ ಸಾವನ್ನಪ್ಪುವವರಲ್ಲಿ ಹೆಚ್ಚಿನವರು ಗಂಡಸರೇ ಆಗಿದ್ದಾರೆ. ೨೦೨೧ರಲ್ಲಿ ದೇಶದಲ್ಲಿ ೫೦,೭೭೩ ಮಂದಿ ದಿಢೀರ್ ಆಗಿ ಸಾವನ್ನಪ್ಪಿದ್ದಾರೆ. ೨೦೨೨ ರಲ್ಲಿ ಹೀಗೆ ೫೬,೬೫೩ ಮಂದಿ ಸಾವನ್ನ ಪ್ಪಿದ್ದು, ಇದರಲ್ಲಿ ೪೭,೪೦೦ ಮಂದಿ ಗಂಡಸರೇ ಆಗಿದ್ದಾರೆ. ಅತೀ ಹೆಚ್ಚು ಎಂಬಂತೆ ಮಹಾರಾಷ್ಟ್ರದಲ್ಲಿ ೧೪,೯೨೭ ಗಂಡಸರು ಸಾವನ್ನಪ್ಪಿದ್ದರೆ, ೬೬೦೭ ಮಂದಿ ಸಾವನ್ನಪ್ಪಿದ ತಮಿಳುನಾಡು ನಂತರದ ಸ್ಥಾನದಲ್ಲಿದೆ. ೫೮೪೮ ಮಂದಿ ಸಾವನ್ನ ಪ್ಪಿದ ಕೇರಳ ಮೂರನೇ ಸ್ಥಾನದಲ್ಲಿದೆ.