ದುಬಾಯಿಯ ಸಂಸ್ಥೆಯಲ್ಲಿ ಪಾಲಿದಾರಿಕೆ ನೀಡುವುದಾಗಿ ತಿಳಿಸಿ ಹಣ ಪಡೆದು ವಂಚನೆ: ಇಬ್ಬರ ವಿರುದ್ಧ ಕೇಸು
ಮುಳ್ಳೇರಿಯ: ದುಬಾಯಿ ಯಲ್ಲಿ ರುವ ಬಿಸ್‌ನೆಸ್‌ನಲ್ಲಿ ಪಾಲುದಾರಿಕೆ ನೀಡುವುದಾಗಿ ಭರವಸೆಯೊಡ್ಡಿ ಕಾಸರಗೋಡು ಪರವನಡ್ಕ ನಿವಾಸಿಯ 1.60 ಕೋಟಿ ರೂಪಾಯಿ ಲಪ ಟಾಯಿಸಿರು ವುದಾಗಿ ದೂರ ಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ನಿರ್ದೇಶ ಮೇರೆಗೆ ಇಬ್ಬರ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಪರವನಡ್ಕ ಆರಿಫ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಎಂ. ಮುಹಮ್ಮದ್ ಅಶ್ರಫ್‌ರ ದೂರಿನಂತೆ ಬೆಳ್ಳಿಪ್ಪಾಡಿಯ ಎಂ. ಮುಹಮ್ಮದ್ ನವಾಸ್, ಚೆಂಗಳ ರೆಹಮ್ಮತ್‌ನಗರದ ಇಬ್ರಾಹಿಂ ಎಂಬಿವರ ವಿರುದ್ಧ ಕೇಸು ದಾಖ ಲಿಸ ಲಾಗಿದೆ. ೨೦೧೫ ಜನವರಿ ಯಿಂದ ೨೦೧೮ ಡಿಸೆಂಬರ್‌ವರೆಗಿನ ಕಾಲಾವ ಧಿಯಲ್ಲಿ ಹಣ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ದುಬಾಯಿ ಯ ಸಿವಿಕ್ ಆನ್‌ಲೈನ್ ಜನರಲ್ ಟ್ರೇಡಿಂಗ್ ಕಂಪೆನಿಯಲ್ಲಿ ಪಾಲುದಾರ ನನ್ನಾಗಿ ಮಾಡುವುದಾಗಿ ತಿಳಿಸಿ ಹಣ ಪಡೆದುಕೊಳ್ಳಲಾಗಿದೆ. ಆದರೆ ಬಳಿಕ ಲಾಭದ ಪಾಲು ಅಥವಾ ನೀಡಿದ ಮೊತ್ತವನ್ನು ಮರಳಿ ನೀಡದೆ ವಂಚಿಸಿರುವು ದಾಗಿ ಮುಹಮ್ಮದ್ ಅಶ್ರಫ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.