ದುಬಾಯ ಬ್ಯಾಂಕ್ಗೆ ವಂಚಿಸಿದ ಪ್ರಕರಣ: ತೃಕ್ಕರಿಪುರ ನಿವಾಸಿ ಸೊತ್ತು ಜಪ್ತಿ
ಕಾಸರಗೋಡು: ದುಬಾಯ ಬ್ಯಾಂಕ್ನಿಂದ ೩೦೦ ಕೋಟಿ ರೂಪಾಯಿಗಳನ್ನು ಲಪಟಾಯಿಸಲಾ ಯಿತೆಂಬ ಆರೋಪದಂತೆ ಎನ್ಫೋ ರ್ಸ್ಮೆಂಟ್ ಡೈರೆಕ್ಟರೇಟ್ (ಇ.ಡಿ) ತನಿಖೆ ತೀವ್ರಗೊಳಿಸಿದೆ. ಇದರ ಅಂಗವಾಗಿ ಆರೋಪಕ್ಕೆಡೆಯಾದ ವ್ಯಕ್ತಿಯ ಸೊತ್ತುಗಳನ್ನು ತನಿಖಾ ತಂಡ ಮುಟ್ಟುಗೋಲು ಹಾಕಿದೆ.ತೃಕ್ಕರಿಪುರ ಉಡುಂಬುಂತಲ ನಿವಾಸಿಯೂ ಸಿನಿಮಾ ನಿರ್ಮಾಪಕನಾದ ಅಬ್ದುಲ್ ರಹ್ಮಾನ್ ಹಾಗೂ ಆತನ ಪತ್ನಿಯ ಹೆಸರಲ್ಲಿ ಬ್ಯಾಂಕ್ಗಳಲ್ಲಿದ್ದ ೩.೫೮ ಕೋಟಿ ರೂಪಾಯಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ಇದರ ಹೊರತು ಚರ ಜಂಗಮ ಸೊತ್ತುಗಳು, ಕಂಪೆನಿಗಳ ಶೇರ್ ಮೊದಲಾದವುಗಳನ್ನು ಮುಟ್ಟುಗೋಲು ಹಾಕಲಾಗಿದೆ. ಅಬ್ದುಲ್ ರಹ್ಮಾನ್ನ ಹೆಕ್ಸ್ ಆಯಿಲ್ ಆಂಡ್ ಗ್ಯಾಸ್ ಸರ್ವೀಸ್ ಎಂಬ ಕಂಪೆನಿಯ ಅಭಿವೃದ್ಧಿಗಾಗಿ ಶಾರ್ಜಾದ ವಿವಿಧ ಬ್ಯಾಂಕ್ಗಳಿಂದಾಗಿ ಸುಮಾರು ೩೪೦ ಕೋಟಿ ರೂಪಾಯಿ ಸಾಲ ಪಡೆದಿರುವುದಾಗಿ ಇ.ಡಿ ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಈ ಪೈಕಿ ಬಹುಪಾಲು ಮೊತ್ತವನ್ನು ಮರಳಿಸದೆ ವಂಚಿಸಲಾಗಿದೆಯೆಂದು ದೂರಲಾಗಿದೆ. ಬ್ಯಾಂಕ್ಗಳು ನೀಡಿದ ದೂರಿನಂತೆ ಚಂದೇರ ಪೊಲೀಸರು ದಾಖಲಿಸಿದ ಪ್ರಕರಣದ ಆಧಾರದಲ್ಲಿ ಇ.ಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದರಂತೆ ತೃಕ್ಕರಿಪುರ, ಕಲ್ಲಿಕೋಟೆ, ಕೊಚ್ಚಿ ಎಂಬೆಡೆಗಳಲ್ಲಿರುವ ಅಬ್ದುಲ್ ರಹ್ಮಾನ್ ಹಾಗೂ ಪತ್ನಿಯ ಮನೆ ಮತ್ತು ಸಂಸ್ಥೆಗಳಿಗೆ ದಾಳಿ ನಡೆಸಲಾಗಿದೆ. ಈ ರೀತಿ ಬ್ಯಾಂಕ್ನಿಂದ ಲಪಟಾಯಿ ಸಿದ ಹಣವನ್ನು ಯಾವ ರೀತಿಯಲ್ಲಿ ಖರ್ಚು ಮಾಡಲಾಗಿದೆಯೆಂಬ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ.