ದುರಹಂಕಾರ, ದುರಾಡಳಿತ ಸಿಪಿಎಂ ಕೊಡುಗೆ-ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಆರೋಪ
ವರ್ಕಾಡಿ: ಜನರು ನೀಡಿದ ಅಧಿಕಾರವನ್ನು ಉಪಯೋಗಿಸಿ ಅದೇ ಜನರನ್ನು ಧಮನಿಸಲು ಯತ್ನಿಸುತ್ತಿ ರುವ ಸಿಪಿಎಂ ಈ ನಾಡಿಗೆ ದುರಹಂಕಾರ ಮತ್ತು ದುರಾಡಳಿ ತವನ್ನು ಮಾತ್ರ ಕೊಡುಗೆಯಾಗಿ ನೀಡಿದೆ ಎಂದು ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ ಆರೋಪಿಸಿ ದ್ದಾರೆ. ಬ್ಲೋಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಜೀರ್ಪಳ್ಳದಲ್ಲಿ ನಡೆಸಿದ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಕಣ್ಣೂರು ಹೆಚ್ಚುವರಿ ದಂಡನಾಧಿಕಾರಿ ನವೀನ್ ಬಾಬುರನ್ನು ಸಾರ್ವಜನಿಕವಾಗಿ ನಿಂದಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಣ್ಣೂರು ಜಿಲ್ಲಾ ಪಂ. ಅಧ್ಯಕ್ಷೆ ಪಿ.ಪಿ. ದಿವ್ಯಾ ರಾಜೀ ನಾಮೆ ನೀಡಬೇಕು, ಅವರ ವಿರುದ್ಧ ಆತ್ಮಹತ್ಯಾ ಪ್ರಚೋದನೆ ಆರೋಪದಂತೆ ಕೇಸು ದಾಖಲಿಸಬೇಕು ಮೊದಲಾದ ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾ ಯಿತು. ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಬೆಜ್ಜ ಅಧ್ಯಕ್ಷತೆ ವಹಿಸಿದರು. ಉಮ್ಮರ್ ಶಾಫಿ, ಬಾಬು ಬಂದ್ಯೋಡು, ಮುಹಮ್ಮದ್ ಸೀಗಂದಡಿ, ವಿನೋದ್ ಕುಮಾರ್ ಪಾವೂರು, ಇಕ್ಭಾಲ್ ಕಳಿಯೂರು, ಫ್ರಾನ್ಸಿಸ್ ಡಿ’ಸೋಜಾ, ಮಹಮ್ಮದ್ ಮಜಾಲ್, ಎ.ಎಂ. ಉಮ್ಮರ್‌ಕುಂಞಿ, ಅಲಿ ಧರ್ಮನಗರ, ವಿಕ್ಟರ್ ಡಿ’ಸೋಜಾ, ಮೊಯ್ದೀನ್ ಹಾಜಿ ವಳಪ್ಪ್, ಅಬೂಬಕ್ಕರ್ ಕಿನ್ಯಜೆ, ಮುಹಮ್ಮದ್ ಅಣೆ, ಅಬ್ದುಲ್ ರಹಿಮಾನ್ ಕೋಳ್ಯೂ ರು, ಅಬೂಬಕರ್ ಧರ್ಮನಗರ, ಇಕ್ಭಾಲ್ ಮೊರತ್ತಣೆ, ಅಬು ಸ್ವಾಲಿ ಮೊರತ್ತಣೆ, ಮೂಸ ಒಡಿಪ್ರ ಕೋಡಿ, ಮೊಯ್ದೀನ್ ಕುಂಞಿ ಕೋಟೆಮಾರ್, ನಾಸಿರ್ ಧರ್ಮನಗರ, ಸಿದ್ದಿಕ್ ಸುಂಕದಕಟ್ಟೆ ಭಾಗವಹಿಸಿದರು. ದಿವಾಕರ ಎಸ್.ಜೆ ಸ್ವಾಗತಿಸಿ, ಮೂಸಾ ಡಿ.ಕೆ. ವಂದಿಸಿದರು.