ದುರ್ಗಾವಾಹಿನಿ ರಾಜ್ಯಮಟ್ಟದ ಶಿಬಿರ: ಸ್ವಾಗತ ಸಮಿತಿ ರೂಪೀಕರಣ 17ರಂದು
ಕಾಸರಗೋಡು: ಯುವತಿಯರ ಶೋಷಣೆ ವಿರುದ್ಧ ನಿರಂತರ ಪ್ರಯತ್ನಿಸಿ ಯುವತಿಯರಿಗೆ ಅಭ್ಯಾಸವರ್ಗಗಳ ಮೂಲಕ ಧ್ಯಾನ, ರಕ್ಷಣಾ ಕಲೆಗಳನ್ನು ಬೆಳೆಸುವ ಕಾರ್ಯವನ್ನು ನಡೆಸುತ್ತಿರುವ ವಿ.ಹಿಂ.ಪ ದುರ್ಗಾವಾಹಿನಿ ಸಂಘದ ಆಶ್ರಯದಲ್ಲಿ ಕೇರಳ ಪ್ರಾಂತ್ಯ ಮಟ್ಟದ ಶಿಬಿರವನ್ನು ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸ ಲಾಗಿದೆ. ಈ ಹಿನ್ನೆಲೆಯಲ್ಲಿ ಶಿಬಿರದ ಯಶಸ್ವಿಗೆ ಸ್ವಾಗತ ಸಮಿತಿ ರೂಪೀಕರಣ ಸಭೆ ಈ ತಿಂಗಳ ೧೭ರಂದು ಸಂಜೆ ೪ ಗಂಟೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜುನಲ್ಲಿ ನಡೆಯಲಿದೆ. ಚಿನ್ಮಯಾ ಮಿಶನ್ನ ವಿವಿಕ್ತಾ ನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ವಿ.ಹಿಂ.ಪ ಕೇರಳ ಪ್ರಾಂತ್ಯ ಕಾರ್ಯದರ್ಶಿ ರಾಜಶೇಖರ್, ಸಹ ಕಾರ್ಯದರ್ಶಿ ಎಂ.ಕೆ. ದಿವಾಕರನ್, ಸಂಘಟನಾ ಕಾರ್ಯದರ್ಶಿ ಶ್ರೀಧರ ಜಿ. ಕಲ್ಲಿಕೋ ಟೆ, ಕಣ್ಣೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಉಪಸ್ಥಿತರಿರು ವರು. ವಿ.ಹಿಂ.ಪ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮುರಳೀ ಕೃಷ್ಣ ಕೋಟೂರು, ಗೋಪಾಲಕೃಷ್ಣ ಪೈ ಬದಿಯಡ್ಕ, ರಾಜೇಶ್ ಮಜಕ್ಕಾರು, ಗೋಪಾಲಕೃಷ್ಣ ಭಟ್ ಎಡನೀರು, ಸುಜ್ಞಾನಿ ಶ್ಯಾನುಭೋಗ್ ಮಧೂರು, ಶೋಭಾ ವಿ. ಶೆಟ್ಟಿ ಕುಂಜತ್ತೂರು ಭಾಗವಹಿಸುವರು.