ದೇಲಂತೊಟ್ಟು ಕ್ಷೇತ್ರದಲ್ಲಿ ಕಾರ್ತಿಕ ಪೂಜೆ ಸಮಾರೋಪ ನಾಳೆ
ಬಂದ್ಯೋಡು: ಹೇರೂರು ಬಜೆ ಶ್ರೀ ಮಹಾವಿಷ್ಣು ದೇವಸ್ಥಾನ ದೇಲಂತೊಟ್ಟು ಇಲ್ಲಿ ಕಾರ್ತಿಕ ದೀಪೋತ್ಸವ, ಸಾಮೂಹಿಕ ಶ್ರೀ ಸತ್ಯವಿನಾಯಕ ಪೂಜೆ, ವಾರ್ಷಿಕ ಜಾತ್ರೆ ನಾಳೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಲಿದೆ. ನಾಳೆ ಬೆಳಿಗ್ಗೆ 6.30ಕ್ಕೆ ಮಹಾಪೂಜೆ, 7ರಿಂದ ಶ್ರೀ ವಿಷ್ಣು ಸಹಸ್ರನಾಮ ಹವನ ಆರಂಭ, 9.30ಕ್ಕೆ ಪೂರ್ಣಾಹುತಿ, 10ರಿಂದ ಕಾರ್ತಿಕ ದೀಪೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉಪಸ್ಥಿತರಿರುವರು. ಉದ್ಯಮಿ ಕೆ.ಕೆ. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4.30ಕ್ಕೆ ತಂಬಿಲ, ಹರಿನಾಮ ಸಂಕೀರ್ತನೆ, 7ರಿಂದ ವಿಶೇಷ ವಾದ್ಯಸೇವೆ, 7.30ಕ್ಕೆ ವಿಶೇಷ ಕಾರ್ತಿಕ ದೀಪೋತ್ಸವ, ರಂಗಪೂಜೆ, 8ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.