ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಶಿಲಾ ದೀಪಸ್ತಂಭ ಕೊಡುಗೆ: ಲೋಕಾರ್ಪಣೆ
ಅಂಗಡಿಮೊಗರು: ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಸೇವಾ ರೂಪದಲ್ಲಿ ಸಮರ್ಪಿಸಿದ ಶಿಲಾ ದೀಪಸ್ತಂಭವನ್ನು ದೇಲಂಪಾಡಿ ಗಣೇಶ ತಂತ್ರಿ ಲೋಕಾರ್ಪಣೆ ಗೊಳಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವ ಚನಗೈದರು.ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್ ಅಧ್ಯಕ್ಷತೆ ವಹಿಸಿ ದ್ದರು. ಈ ವೇಳೆ ಕ್ಷೇತ್ರಕ್ಕೆ ದೀಪವನ್ನು ಸಮರ್ಪಿಸಿದ ಪುತ್ತಿಗೆ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀರಾಮ ಅಡಿಗಳು ಮತ್ತು ಶಿಲ್ಪಿ ತ್ಯಾಗರಾಜ ಆಚಾರ್ಯ ಬೆದ್ರಂಪಳ್ಳ ಅವರನ್ನು ಸನ್ಮಾನಿಸಲಾಯಿತು. ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶು ಪಾಲ ರಾಮಚಂದ್ರ ಭಟ್,ಉದ್ಯಮಿ ನವೀನ್ ಶೆಟ್ಟಿ ಮಂಗಳೂರು, ಪುತ್ತಿಗೆ ಪಂ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಉಪಸ್ಥಿತರಿದ್ದರು. ಡಿ.ರಾಜೇಂದ್ರ ರೈ ಸ್ವಾಗತಿಸಿ, ನಿರೂಪಿಸಿದರು.