ದೇವರಮೆಟ್ಟು ನಿವಾಸಿ ಕುವೈತ್‌ನಲ್ಲಿ ನಿಧನ
ನೀರ್ಚಾಲು: ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ದೇವರಮೆಟ್ಟು ನಿವಾಸಿ ಮೌರೀಸ್ ಡಿ’ಸೋಜ ಎಂಬವರ ಪುತ್ರ ಸಂತೋಷ್ ಡಿ’ಸೋಜಾ (೩೪) ಮೃತಪಟ್ಟವರಾಗಿದ್ದಾರೆ. ಇವರು ಕಳೆದ ಹದಿನಾಲ್ಕು ವರ್ಷಗಳಿಂದ ಕುವೈತ್‌ನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ನಾಲ್ಕು ತಿಂಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಮೃತದೇಹವನ್ನು ಊರಿಗೆ ತಲುಪಿಸಿದ ಬಳಿಕ ಇಂದು ಬೆಳಿಗ್ಗೆ ಬೇಳ ಶೋಕ ಮಾತಾ ಇಗರ್ಜಿ ಆವರಣ ದೊಳಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ತಂದೆ, ತಾಯಿ ಜೂಲಿಯಾನ ಡಿ’ಸೋಜಾ, ಸಹೋದರಿಯರಾದ
ವಿನ್ಸೆಂಟ್ ಡಿ’ಸೋಜಾ, ವೀಣ ಡಿ’ಸೋಜಾ, ಮರೀದ ಪಿಂಟೋ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.